ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ಐಸಿಸಿ ಮಹಿಳೆಯರ ವರ್ಷದ ಟಿ20 ತಂಡ(2021)ವನ್ನು ಪ್ರಕಟಿಸಿದ್ದು, ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 11 ರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಪುರುಷರ ತಂಡದಲ್ಲಿ ಭಾರತೀಯ ಕ್ರಿಕೆಟಿಗರು ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಈ 11ರ ಬಳಗಕ್ಕೆ ಇಂಗ್ಲೆಂಡ್ ಆಲ್ರೌಂಡರ್ ನ್ಯಾಟ್ ಸೀವರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದೇ ತಂಡದ ಆ್ಯಮಿ ಜೋನ್ಸ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ಈ ತಂಡದಲ್ಲಿ ಏಕೈಕ ಭಾರತೀಯ ಆಟಗಾರ್ತಿಯಾಗಿರುವ ಮಂಧಾನ 2021ರಲ್ಲಿ 9 ಪಂದ್ಯಗಳಿಂದ 31.87ರ ಸರಾಸರಿಯಲ್ಲಿ 131.44ರ ಸ್ಟ್ರೈಕ್ರೇಟ್ನಲ್ಲಿ 2 ಅರ್ಧಶತಗಳ ಸಹಿತ 255 ರನ್ಗಳಿಸಿದ್ದರು.
ವರ್ಷದ ಟಿ20 ತಂಡದಲ್ಲಿ ಸೀವರ್, ಜೋನ್ಸ್ ಅಲ್ಲದೆ ಒಟ್ಟು ಐವರು ಆಟಗಾರ್ತಿಯರು ಅವಕಾಶ ಪಡೆದಿದ್ದಾರೆ. ಡೇನಿಯಲ್ ವ್ಯಾಟ್, ಟಮ್ಮಿ ಬ್ಯೂಮಾಂಟ್ ಮತ್ತು ನಂಬರ್ ಟಿ20 ಬೌಲರ್ ಸೋಫಿ ಎಕ್ಲೆನ್ಸ್ಟೋನ್ ಕೂಡ ಇಂಗ್ಲೆಂಡ್ ತಂಡದಿಂದ ಆಯ್ಕೆಯಾಗಿದ್ದಾರೆ.