ಕರ್ನಾಟಕ

karnataka

ETV Bharat / sports

ಟೆಸ್ಟ್​ ಮನಸ್ಥಿತಿಗೆ ಬರಲು ಕೋಚ್​ ಅಮೋಲ್ ಮಜುಂದಾರ್ ಅನುಭವ ಸಹಕಾರಿ ಆಗಲಿದೆ: ಮಂಧಾನ - ETV Bharath Kannada news

Smriti Mandhana about Test against England: ಎರಡು ವರ್ಷದ ನಂತರ ವನಿತೆಯರ ಕ್ರಿಕೆಟ್​ ತಂಡ ಅಂತಾರಾಷ್ಟ್ರೀಯ ಟೆಸ್ಟ್​ ಆಡುತ್ತಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವೆ ಏಕೈಕ ಟೆಸ್ಟ್‌ ಆಯೋಜಿಸಲಾಗಿದೆ.

Smriti Mandhana
Smriti Mandhana

By ETV Bharat Karnataka Team

Published : Dec 12, 2023, 8:08 PM IST

ಅಂತಾರಾಷ್ಟ್ರೀಯವಾಗಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಯೋಜಿಸಿಬೇಕು - ವನಿತೆಯರ ತಂಡದ ಉಪನಾಯಕಿ ಸ್ಮೃತಿ ಮಂಧಾನ

ಮುಂಬೈ (ಮಹಾರಾಷ್ಟ್ರ): ಅಂತಾರಾಷ್ಟ್ರೀಯವಾಗಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಯೋಜಿಸಿದರೆ, ದೇಶೀಯ ಮಹಿಳೆಯರ ಕ್ರಿಕೆಟ್​ನಲ್ಲೂ ಟೆಸ್ಟ್​ ಮಾದರಿಯ ಕ್ರಿಕೆಟ್​ ಆಡಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಡಿಸಬೇಕು ಎಂದು ವನಿತೆಯರ ತಂಡದ ಉಪನಾಯಕಿ ಸ್ಮೃತಿ ಮಂಧಾನ ಹೇಳಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯಕ್ಕೂ ಎರಡು ದಿನ ಮುಂಚಿತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಧಾನ,"ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ತಕ್ಕಂತೆ ದೇಶೀಯ ಕ್ರಿಕೆಟ್​ ಋತುವನ್ನು ತಯಾರಿಸಲಾಗುತ್ತದೆ. ಹೆಚ್ಚು ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯಗಳನ್ನು ಆಯೋಜಿಸಿದಲ್ಲಿ ದೇಶೀಯ ಮಹಿಳಾ ಕ್ರಿಕೆಟ್​ನಲ್ಲೂ 2 ಅಥವಾ 4 ದಿನದ ಪಂದ್ಯಾವಳಿಗಳು ಕಾಣಲು ಸಿಗಬಹುದು" ಎಂದಿದ್ದಾರೆ.

ತವರಿನಲ್ಲಿ 9 ವರ್ಷಗಳ ನಂತರ ವನಿತೆಯರು ರೆಡ್​ ಬಾಲ್​ ಕ್ರಿಕೆಟ್​ ಆಡುತ್ತಿದ್ದಾರೆ. ಹೀಗಿಗಾ, ಮಹಿಳಾ ತಂಡಕ್ಕೆ ಟೆಸ್ಟ್​ ಪಂದ್ಯಗಳಲ್ಲಿ ಅನುಭವ ಕಡಿಮೆ ಇದೆ ಎಂದೇ ಹೇಳಬಹುದು. ಉಪನಾಯಕಿ ಸ್ಮೃತಿ ಮಂಧಾನ ಇಂಗ್ಲೆಂಡ್​ ವಿರುದ್ಧ ವೈಟ್​ ಜರ್ಸಿ ಪಂದ್ಯಕ್ಕೆ ನೂತನ ಕೋಚ್​ ಅಮೋಲ್ ಮಜುಂದಾರ್ ಅವರ ಸಲಹೆ ಅನುಸರಿಸುವುದಾಗಿ ಹೇಳಿದ್ದಾರೆ.

ಅಮೋಲ್ ಮಜುಂದಾರ್ ಅನುಭವ ಸಹಕಾರಿ:"ನಮ್ಮಲ್ಲಿ ಅನುಭವಿ ತರಬೇತುದಾರ ಅಮೋಲ್ ಸರ್ ಇದ್ದಾರೆ. ಅವರು ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸಾಕಷ್ಟು ಆಡಿದ್ದಾರೆ ಮತ್ತು ಸಾಕಷ್ಟು ಟೆಸ್ಟ್​ ಕ್ರಿಕೆಟ್ ಆಡಿದ್ದಾರೆ. ನಮ್ಮಲ್ಲಿ ಇಬ್ಬರು ಅಥವಾ ಮೂವರು ಮಾತ್ರ ಟೆಸ್ಟ್​ ಕ್ರಿಕೆಟ್​ನ ಅನುಭವ ಹೊಂದಿದ್ದಾರೆ. ಬಹಳಷ್ಟು ಆಟಗಾರ್ತಿಯರು ಕೋಚ್​ ಬಳಿ ಟೆಸ್ಟ್​ ಆಡುವ ಮನಸ್ಥಿತಿ ಬಗ್ಗೆ ಕೇಳುವುದುನ್ನು ನೋಡಿದ್ದೇನೆ" ಎಂದರು.

ಭಾರತ 2 ವರ್ಷದ ಹಿಂದೆ ಅಂದರೆ 2021ರ ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ಗಳನ್ನು ಆಡಿದೆ. ಎರಡೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇಂಗ್ಲೆಂಡ್ ವನಿತೆಯರ ತಂಡ ಈ ವರ್ಷದ ಜೂನ್‌ನಲ್ಲಿ ನಡೆದ ಮಹಿಳಾ ಆಶಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯವಾಗಿದ್ದರಿಂದ ಇತ್ತೀಚೆಗೆ ರೆಡ್-ಬಾಲ್ ಕ್ರಿಕೆಟ್ ಆಡಿರುವ ಅನುಭವವನ್ನು ಹೊಂದಿದೆ.

ಇಂಗ್ಲೆಂಡ್​ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ವನಿತೆಯರ ಎ ತಂಡ ಇಂಗ್ಲೆಂಡ್​ ವಿರುದ್ಧ ಆಡಿತ್ತು. "ನಾವು ಒಂದು ಅಭ್ಯಾಸ ಪಂದ್ಯವನ್ನು ಹೊಂದಿದ್ದೆವು, ಎಲ್ಲ ಹುಡುಗಿಯರು ಅದರ ಭಾಗವಾಗಿದ್ದರು. ಸ್ವಲ್ಪ ದೈಹಿಕ ಸಮಸ್ಯೆಯಿಂದಾಗಿ ನಾನು ಆಡಲು ಸಾಧ್ಯವಾಗಲಿಲ್ಲ ಆದರೆ, ನಾವು ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಉತ್ತಮ ಪಂದ್ಯವನ್ನು ಆಡಿದೆವು, ಭಾರತ ಎ ಹುಡುಗಿಯರನ್ನು ಕೆಂಪು - ಬಾಲ್ ಕ್ರಿಕೆಟ್​ನಲ್ಲಿ ಉತ್ತಮ ಸಿದ್ಧತೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಸಂಪೂರ್ಣ ತಂಡ ಇಲ್ಲಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ" ಎಂದು ಮಾಹಿತಿ ನೀಡಿದ್ದಾರೆ.

"ಟೆಸ್ಟ್​ಗೆ ದೈಹಿಕ ಮತ್ತು ಮಾನಸಿಕ ತಯಾರಿ ಬೇಕಾಗುತ್ತದೆ. ನಾಲ್ಕು ದಿನ ಮೈದಾನದಲ್ಲಿ ಆಡುವುದಕ್ಕೆ ಹೆಚ್ಚು ಶ್ರಮ ವಹಿಸಬೇಕು. ನಾವು ಕಳೆದ ಕೆಲ ವರ್ಷಗಳಿಂದ ಟಿ-20 ಮತ್ತು ಏಕದಿನವನ್ನೇ ಹೆಚ್ಚು ಆಡಿದ್ದರಿಂದ ಇದು ಒತ್ತಡ ಎಂದು ಕಾಣಿಸಬಹುದು. ಆದರೆ, ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚು ತಾಳ್ಮೆಯಿಂದ ಆಡಬೇಕು. ಅವಕಾಶ ಸಿಕ್ಕಿದರೆ ಸಿಕ್ಸ್​ ಸಹ ಹೊಡೆಯಬಹುದು" ಎಂದು ನಗುತ್ತಾ ಉತ್ತರಿಸಿದರು.

ಇದನ್ನೂ ಓದಿ:ರಿಷಭ್​ ಪಂತ್​ ನಾಯಕತ್ವದಲ್ಲೇ 2024ರ ಐಪಿಎಲ್​ ಆಡಲಿದೆ ಡೆಲ್ಲಿ ಕ್ಯಾಪಿಟಲ್ಸ್..!​​

ABOUT THE AUTHOR

...view details