ಕರ್ನಾಟಕ

karnataka

ETV Bharat / sports

'ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್' ಹೇಳಿಕೆ: ರೋಹಿತ್ ನಾಲಿಗೆ ಜಾರಿದೆ ಎಂದ ಪಾಕ್ ಮಾಜಿ ಬೌಲರ್ - ಕಪಿಲ್ ದೇವ್ ದಾಖಲೆ

ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಇನ್ನಿಂಗ್ಸ್​ ಹಾಗೂ 222 ರನ್​ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 2 ಇನ್ನಿಂಗ್ಸ್​ ಸೇರಿ 6 ವಿಕೆಟ್​ ಪಡೆದಿದ್ದ ಅಶ್ವಿನ್ ಕಪಿಲ್ ದೇವ್​(434) ದಾಖಲೆಯನ್ನು ಬ್ರೇಕ್ ಮಾಡಿದ್ದರು.

Rashid Latif disagrees with Rohit's all-time great' comment on Ashwin
ರೋಹಿತ್ ಶರ್ಮಾ ರವಿಚಂದ್ರನ್ ಅಶ್ವಿನ್

By

Published : Mar 10, 2022, 10:38 PM IST

ಹೈದರಾಬಾದ್​(ಡೆಸ್ಕ್): ಮೊದಲ ಟೆಸ್ಟ್​ ಪಂದ್ಯದಲ್ಲಿ ಕಪಿಲ್ ದೇವ್ ದಾಖಲೆ ಮುರಿದಿದ್ದಕ್ಕೆ ಅಶ್ವಿನ್​ರನ್ನು ಹೊಗಳುವ ಬರದಲ್ಲಿ ರೋಹಿತ್ ಶರ್ಮಾ ನಾಲಿಗೆ ಜಾರಿ ಅವರನ್ನು 'ಸಾರ್ವಕಾಲಿಕ ಶ್ರೇಷ್ಠ ಬೌಲರ್' ಎಂದಿರಬಹುದು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್​ ಹೇಳಿದ್ದಾರೆ. ಅಶ್ವಿನ್ ಆ ಸ್ಥಾನವನ್ನು ಪಡೆಯುವುದಕ್ಕೆ ಇನ್ನು ಸಮಯವಿದೆ ಎಂದಿದ್ದಾರೆ.

"ಅಶ್ವಿನ್ ಒಬ್ಬ ಶ್ರೇಷ್ಠ ಬೌಲರ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆತ ಬೌಲಿಂಗ್​ನಲ್ಲಿ ಅತ್ಯುತ್ತಮ ವೇರಿಯೇಷನ್ಸ್ ತರುತ್ತಾರೆ. ಭಾರತದ ಪಿಚ್​ಗಳಲ್ಲಿ ಆತ ಖಂಡಿತ ಅತ್ಯುತ್ತಮ ಬೌಲರ್​. ಆದರೆ ವಿದೇಶದಲ್ಲಿ ಅಷ್ಟಕಷ್ಟೇ. ರೋಹಿತ್​ರ ಆ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಕುಂಬ್ಳೆ, ಜಡೇಜಾ, ಬಹಳ ಹಿಂದೆ ಬಿಷನ್ ಸಿಂಗ್ ಬೇಡಿ ಅಂತಹ ಬೌಲರ್​ಗಳು ವಿದೇಶದಲ್ಲೂ ಮಿಂಚಿದ್ದಾರೆ. ರೋಹಿತ್ ಬಳಸಿರುವ ಸಾರ್ವಕಾಲಿಕ ಶ್ರೇಷ್ಠ ಪದ ನಾಲಿಗೆ ಜಾರಿ ಬಂದಿರಬಹುದು. ಆಟಗಾರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ನಾಯಕ ಆ ರೀತಿ ಹೇಳುವುದು ಒಂದು ಪದ್ಧತಿ" ಎಂದಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಇನ್ನಿಂಗ್ಸ್​ ಹಾಗೂ 222 ರನ್​ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 2 ಇನ್ನಿಂಗ್ಸ್​ ಸೇರಿ 6 ವಿಕೆಟ್​ ಪಡೆದಿದ್ದ ಅಶ್ವಿನ್ ಕಪಿಲ್ ದೇವ್​(434) ದಾಖಲೆಯನ್ನು ಬ್ರೇಕ್ ಮಾಡಿದ್ದರು. ಇದೀಗ ತಮ್ಮ ಖಾತೆಯಲ್ಲಿ 436 ವಿಕೆಟ್ ಹೊಂದಿರುವ ಅವರು ಅನಿಲ್ ಕುಂಬ್ಳೆ(619) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಐಪಿಎಲ್ ಅನ್​ಸೋಲ್ಡ್​ ಪೂಜಾರಾಗೆ ಡಬಲ್ ಧಮಾಕ: ಇಂಗ್ಲೆಂಡ್ ದೇಶಿ ಟೂರ್ನಿಗಳಲ್ಲಿ ಆಡುವ ಅವಕಾಶ

ABOUT THE AUTHOR

...view details