ಕೊಲಂಬೊ: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಏಕದಿನ ಮತ್ತು ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಈಗಾಗಲೇ ಬದಲಾವಣೆ ಮಾಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಇದೀಗ ಪಂದ್ಯ ಆರಂಭದ ಸಮಯವನ್ನು ಬದಲಾವಣೆ ಮಾಡಿರುವುದಾಗಿ ಸೋಮವಾರ ಘೋಷಣೆ ಮಾಡಿದೆ.
ಜುಲೈ 18ರಿಂದ ಏಕದಿನ ಸರಣಿ ಆರಂಭವಾಗಲಿದೆ. ಮೊದಲು ಏಕದಿನ ಪಂದ್ಯಗಳನ್ನು ಮಧ್ಯಾಹ್ನ 1:30ಕ್ಕೆ ಟಿ20 ಪಂದ್ಯಗಳನ್ನು, ಸಂಜೆ 7 ಗಂಟೆಗೆ ಆರಂಭಿಸಲು ಸಮಯ ನಿಗದಿ ಮಾಡಲಾಗಿತ್ತು.
ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ ಎರಡು ಮಾದರಿಯ ಪಂದ್ಯಗಳ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಏಕದಿನ ಪಂದ್ಯ ಮಧ್ಯಾಹ್ನ 3 ಗಂಟೆಗೂ , ಟಿ20 ಪಂದ್ಯ ರಾತ್ರಿ 8 ಗಂಟೆಗೂ ಆರಂಭವಾಗಲಿದೆ.