ಕೊಲಂಬೊ: ಭಾರತದೆದುರಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎರಡು ತಂಡದಲ್ಲೂ ಇಬ್ಬರು ಚುಟುಕು ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ.
ಭಾರತ ತಂಡದ ಪರ ಪೃಥ್ವಿ ಶಾ ಮತ್ತು ವರುಣ್ ಚಕ್ರವರ್ತಿ ಟಿ20 ಕ್ರಿಕೆಟ್ ಕ್ಯಾಪ್ ಪಡೆದಿದ್ದಾರೆ.ಶ್ರೀಲಂಕಾ ಮೂರು ಬದಲಾವಣೆ ಮಾಡಿಕೊಂಡಿದೆ. ಇಸುರು ಉದಾನ ಕಮ್ಬ್ಯಾಕ್ ಮಾಡಿದ್ದಾರೆ. ಇಬ್ಬರು ಯುವ ಆಟಗಾರರು ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ.