ಕರ್ನಾಟಕ

karnataka

ETV Bharat / sports

England vs Sri Lanka: ಮೊದಲ ಏಕದಿನ ಪಂದ್ಯ ಸೋತ ಶ್ರೀಲಂಕಾ - ಇಂಗ್ಲೆಂಡ್​ ವರ್ಸಸ್​ ಲಂಕಾ ಏಕದಿನ

ಟಿ-20 ಸರಣಿಯಲ್ಲಿ ಹೀನಾಯ ಸೋಲಿನ ಬೆನ್ನಲ್ಲೇ ಶ್ರೀಲಂಕಾ ತಂಡ ಮೊದಲ ಏಕದಿನ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ಮುಂದುವರೆಸಿದ್ದು, ಮೊದಲ ಪಂದ್ಯ ಕೈಚೆಲ್ಲಿದೆ.

England beat lanka
England beat lanka

By

Published : Jun 29, 2021, 10:41 PM IST

ಚೆಸ್ಟರ್-ಲೆ-ಸ್ಟ್ರೀಟ್​: ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ 5ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ ಕ್ಯಾಪ್ಟನ್​ ಕುಸಾಲ್​ ಪರೇರಾ 73ರನ್​ ಹಾಗೂ ಹಸರಂಗ 54 ರನ್​ಗಳ ನೆರವಿನಿಂದ 42.3 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 185ರನ್​ ಮಾತ್ರ ಗಳಿಕೆ ಮಾಡಿತು. ತಂಡದ ಪರ ಮೂರು ಪ್ಲೇಯರ್ಸ್ ಮಾತ್ರ ಎರಡಂಕಿ ರನ್​ಗಳಿಕೆ ಮಾಡಿದ್ರೆ, ಉಳಿದಂತೆ ಎಲ್ಲರೂ ವೈಫಲ್ಯ ಅನುಭವಿಸಿದರು.

ಬೌಲಿಂಗ್​ನಲ್ಲಿ ಮಿಂಚಿದ ವೋಕ್ಸ್​​

ಇಂಗ್ಲೆಂಡ್​ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ಕ್ರಿಸ್​ ವೋಕ್ಸ್​ 4, ವಿಲ್ಲೆ 3 ವಿಕೆಟ್​ ಪಡೆದುಕೊಂಡರೆ ಮೊಯಿನ್​ 1ವಿಕೆಟ್​ ಪಡೆದುಕೊಂಡರು.

186ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ಆರಂಭದಲ್ಲೇ ಲಿವ್ಹಿಂಗ್​​​ಸ್ಟೋನ್​ (9)ವಿಕೆಟ್​ ಕಳೆದುಕೊಂಡಿತು. ವಿಕೆಟ್​ ಕೀಪರ್​ ಬೈರ್​ಸ್ಟೋ ಅವರ 43ರನ್​ ಹಾಗೂ ರೂಟ್​​​ರ ಅಜೇಯ 79 ರನ್​ಗಳ ನೆರವಿನಿಂದ ಗೆಲುವಿನತ್ತ ದಾಪುಗಾಲು ಹಾಕಿತು. ಬೈರ್​​ಸ್ಟೋ ವಿಕೆಟ್​​ ಪತನದ ಬಳಿಕ ಮಾರ್ಗನ್​(6) ರನ್, ಸ್ಯಾಮ್​ ಬಿಲ್ಲಿಂಗ್ಸ್​​(3)ರನ್​ಗಳಿಕೆ ಮಾಡಿದರು. ಉಳಿದಂತೆ ಮೊಯಿನ್​ ಅಲಿ 28ರನ್​ ಹಾಗೂ ಕರ್ರನ್​ ಅಜೇಯ 9 ರನ್​ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಂಡ 34.5 ಓವರ್​ಗಳಲ್ಲಿ 5ವಿಕೆಟ್​ನಷ್ಟಕ್ಕೆ 189 ರನ್​ಗಳಿಕೆ ಮಾಡಿ ಗೆಲುವು ಸಾಧಿಸಿತು. ಜತೆಗೆ ಸರಣಿಯಲ್ಲಿ ಮುನ್ನಡೆ ಸಾಧಿಸಿತು. ಲಂಕಾ ಪರ ಚಮೇರಾ 3 ವಿಕೆಟ್​, ಫರ್ನಾಡೋ ಹಾಗೂ ಕರುಣರತ್ನೆ ತಲಾ 1ವಿಕೆಟ್​ ಪಡೆದುಕೊಂಡರು.

ABOUT THE AUTHOR

...view details