ಬಾರ್ಬಡೊಸ್: ನಾಯಕ ಮೊಯೀನ್ ಅಲಿ ಅವರ ಆಲ್ರೌಂಡರ್ ಆಟದ ನೆರವಿನಿಂದ ಇಂಗ್ಲೆಂಡ್ ತಂಡ 4ನೇ ಟಿ20 ಪಂದ್ಯವನ್ನು 34 ರನ್ಗಳ ಅಂತರದಿಂದ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು, ಟಿ20 ಸರಣಿಯನ್ನು 2-2ರಲ್ಲಿ ಸಮಬಲ ಸಾಧಿಸಿದೆ.
5 ಪಂದ್ಯಗಳ ಸರಣಿಯನ್ನು ಉಳಿಸಿಕೊಳ್ಳಬೇಕಾಗಿದ್ದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತ್ತು. ಆರಂಭಿಕ ಬ್ಯಾಟರ್ ಜೇಸನ್ ರಾಯ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಬೌಂಡರಿಗಳ ನೆರವಿನಿಂದ 52 ರನ್ಗಳಿಸಿದರೆ, ಜೇಮ್ಸ್ ವಿನ್ಸ್ 26 ಎಸೆತಗಳಲ್ಲಿ 34, ಮೊಲೀನ್ ಅಲಿ 18ನೇ ಓವರ್ನಲ್ಲಿ 28 ರನ್ ಸೇರಿದಂತೆ ಕೇವಲ 28 ಎಸೆತಗಳಲ್ಲಿ ಒಂದು ಬೌಂಡರಿ 7 ಸಿಕ್ಸರ್ಗಳ ಸಹಿತ 63 ರನ್ಗಳಿಸಿದರು.
ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 44 ರನ್ ನೀಡಿ 3 ವಿಕೆಟ್ ಪಡೆದರೆ, ಅಕೀಲ್ ಹೊಸೈನ್ 23ಕ್ಕೆ 1, ಪೊಲಾರ್ಡ್ 23ಕ್ಕೆ 1 ಶೆಫರ್ಡ್ 40ಕ್ಕೆ 1 ವಿಕೆಟ್ ಪಡೆದರು.
ಇನ್ನು 194 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಪವರ್ ಪ್ಲೇನಲ್ಲಿ ಕೈಲ್ ಮೇಯರ್ಸ್(40) ಅಬ್ಬರದಿಂದ 7 ಓವರ್ಗಳಲ್ಲಿ 64 ರನ್ಗಳನ್ನು ಸೇರಿಸಿತ್ತು. ಆದರೆ ಮೊಯೀನ್ ಅಲಿ ಆರಂಭಿಕರ ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ಅವರು 23 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ನೆರವಿನಿಂದ 40 ರನ್ಗಳಿಸಿದ್ದ ಮೇಯರ್ಸ್ ಮತ್ತು ತಮ್ಮ ಕೊನೆಯ ಓವರ್ನಲ್ಲಿ 27 ಎಸೆತಗಳಲ್ಲಿ 26 ರನ್ಗಳಿಸಿ ಪರದಾಡುತ್ತಿದ್ದ ಬ್ರೆಂಡನ್ ಕಿಂಗ್ರನ್ನು ಕೂಡ ಪೆವಿಲಿಯನ್ಗಟ್ಟಿದರು.ಮೊದಲ 6 ಓವರ್ನಲ್ಲಿ ಅಬ್ಬರಿಸಿದ್ದ ವಿಂಡೀಸ್ ನಂತರ 6 ಓವರ್ಗಳಲ್ಲಿ ಒಂದು ಬೌಂಡರಿ ಸಿಡಿಸಲಾಗದೆ ಪರದಾಡಿತು.