16 ವರ್ಷಗಳ ಹಿಂದೆ ಇದೇ ದಿನ ಭಾರತದ ಕ್ರಿಕೆಟ್ ಮೈದಾನದಲ್ಲಿ ಒಂದು ಚಮತ್ಕಾರವೇ ನಡೆದಿತ್ತು. ಚೊಚ್ಚಲ ಟಿ20 ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆಯುತ್ತಿತ್ತು. ಇಂಗ್ಲೆಂಡ್ನ ಫ್ಲಿಂಟಾಫ್ ಎಂಬ ಆಟಗಾರ ಭಾರತದ ಆಟಗಾರ ಒಬ್ಬನನ್ನು ಮೈದಾನದಲ್ಲಿ ಕೆಣಕ್ಕಿದ್ದರು. ಇದಕ್ಕೆ ಮೈದಾನದಲ್ಲಿ ಮಾತಿನ ಮೂಲಕ ಉತ್ತರ ಕೊಟ್ಟಿದ್ದಲ್ಲದೇ, ಬ್ಯಾಟ್ನಿಂದಲೂ ಉತ್ತರಿಸಿದ್ದರು. ಆಂಡ್ರ್ಯೂ ಫ್ಲಿಂಟಾಫ್ ಮಾಡಿದ್ದ ತಪ್ಪಿಗೆ ಬೆಲೆ ತೆತ್ತಿದ್ದು ಮಾತ್ರ ಸ್ಟುವರ್ಟ್ ಬ್ರಾಡ್. ಕ್ರಿಕೆಟ್ ಪ್ರಿಯರಿಗೆ ಈ ಘಟನೆ ನೆನಪಿಗೆ ಬಂದಿರಬಹುದು. ಅದೇ ಯುವರಾಜ್ ಸಿಂಗ್ ಬ್ರಾಡ್ ಅವರ 6 ಬಾಲ್ನ್ನು 6 ಸಿಕ್ಸ್ ಆಗಿ ಪರಿವರ್ತಿಸಿದ ದಿನವದು.
ಯುವಿ ಅಂದು ಕೇವಲ 12 ಬಾಲ್ನಲ್ಲಿ ದಾಖಲೆಯ ಅರ್ಧಶತಕ ಗಳಿಸಿದ್ದರು. ಅವರು ಅಂದಿನ ಪಂದ್ಯದಲ್ಲಿ 16 ಬಾಲ್ ಆಡಿ 7 ಸಿಕ್ಸ್, 3 ಬೌಂಡರಿಯ ಸಹಾಯದಿಂದ 58 ರನ್ ಕಲೆ ಹಾಕಿದ್ದರು. ಯುವರಾಜ್ ಸಿಂಗ್ ಅವರ ಸ್ಟ್ರೈಕ್ರೇಟ್ 362.50 ಆಗಿತ್ತು. ಹತ್ತು ಬಾಲ್ನಲ್ಲಿ ಬೌಂಡರಿ, ಸಿಕ್ಸ್ ಬಾರಿಸಿದ್ದರೆ ನಾಲ್ಕು ಬಾಲ್ನಲ್ಲಿ ಸಿಂಗಲ್ ರನ್ ಪಡೆದಿದ್ದರು, ಕೇವಲ ಎರಡು ಬಾಲ್ ಡಾಟ್ ಆಗಿತ್ತು. ಇಂಗ್ಲೆಂಡ್ ನೆಲದಲ್ಲಿ ಅವರನ್ನೇ ಅಂದು ಭಾರತ 18 ರನ್ನಿಂದ ಮಣಿಸಿತ್ತು. ಅಲ್ಲದೇ ಧೋನಿ ಅವರ ನಾಯಕತ್ವದಲ್ಲಿ ಪ್ರಶಸ್ತಿ ಮುಡಿಗೇರಿತ್ತು.
ಈ ಇನ್ನಿಂಗ್ಸ್ನಿಂದ ಯುವರಾಜ್ ಸಿಂಗ್ ಕೇವಲ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ, ಜಗತ್ತಿನಾದ್ಯಂತ ಪರಿಚಿತರಾದರು. ಅಲ್ಲದೇ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆರು ಬಾಲ್ನ್ನು ಸಿಕ್ಸ್ಗೆ ಅಟ್ಟಿದ ಸಾಧನೆ ಮಾಡಿದರು. ಇಂಗ್ಲೆಂಡ್ನ ಡರ್ಬನ್ ಮೈದಾನದಲ್ಲಿ ಯುವಿ ಸಿಕ್ಸ್ನ ದಾಖಲೆ ಈಗಲು ನವಿರಾಗಿಯೇ ಇದೆ. ಇಂದಿಗೂ ಆಟ ಭಾರತೀಯರ ಸ್ಮೃತಿಯಿಂದ ಅಳಿಸಿ ಹೋಗಿಲ್ಲ.