ನವದೆಹಲಿ: ಬೆನ್ನುನೋವಿನಿಂದ ಬಳಲುತ್ತಿರುವ ದೀಪಕ್ ಚಹಾರ್ ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಶೀಘ್ರದಲ್ಲೇ ಆಸ್ಟ್ರೇಲಿಕ್ಕೆ ತೆರಳಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಸ್ಟ್ಯಾಂಡ್-ಬೈ ಆಟಗಾರರಾಗಿದ್ದ ದೀಪಕ್ ಚಹಾರ್ ತಂಡಕ್ಕೆ ಸೇರುವ ನೀರಿಕ್ಷೆ ಇತ್ತು. ಆದರೆ, ದಕ್ಷಿಣ ಆಫ್ರಿಕಾದ ಎದುರಿನ ಮೂರನೇ ಟಿ 20 ಪಂದ್ಯದ ವೇಳೆಗೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು.
ದೀಪಕ್ ಫಿಟ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅವರ ಬೆನ್ನಿನ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ. ಆದ್ದರಿಂದ ಬಿಸಿಸಿಐ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಆಸ್ಟೇಲಿಯಾಕ್ಕೆ ಕಳುಹಿಸುತ್ತಿದ್ದು ಇಬ್ಬರು ಸ್ಟ್ಯಾಂಡ್-ಬೈ ಆಟಗಾರರಾಗಿರಲಿದ್ದಾರೆ ಎಂದು ತಿಳಿದು ಬಂದಿದೆ.
ದೀಪಕ್ ಚಹಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ 20 ಪಂದ್ಯದ ವೇಳೆ ಬೆನ್ನು ನೋವಿನ ಕಾರಣ ತಂಡದಿಂದ ಹೊರಗುಳಿದ್ದಿದ್ದರು. ನೋವು ಉಲ್ಬಣಗೊಂಡಿದ್ದರಿಂದ ಏಕದಿನ ಸರಣಿಗೆ ಚಹಾರ್ರನ್ನು ತಂಡದಿಂದ ಕೈಬಿಟ್ಟು ಸಿರಾಜ್ಗೆ ಸ್ಥಾನ ನೀಡಲಾಯಿತು. ಬೂಮ್ರಾ ಬದಲಿ ಆಟಗಾರರನ್ನು ಬಿಸಿಸಿಐ ಇನ್ನು ಘೋಷಿಸಿಲ್ಲ, ಈ ಹಿನ್ನೆಲೆಯಲ್ಲಿ ಆಟಗಾರರ ದೇಹ ಸಧೃಡತೆ ಪರೀಕ್ಷಿಸಲು ಮೂವರು ಬೌಲರ್ಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುತ್ತಿದ್ದಾರೆ.