ಗುವಾಹಟಿ:ಭಾರತದ ಪ್ರಮುಖ ವೇಗಿ, ಬೌಲಿಂಗ್ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಿಂದ ಹೊರಹೋಗಿದ್ದಾರೆ. ಬೂಮ್ರಾ ಜಾಗಕ್ಕೆ ಬದಲಿಯಾಗಿ ಮೊಹಮ್ಮದ್ ಸಿರಾಜ್ ಆಯ್ಕೆ ಮಾಡಿರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಖಚಿತಪಡಿಸಿದೆ .
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾನುವಾರ ರೋಹಿತ್ ನಾಯಕತ್ವದಲ್ಲಿ ಗುವಾಹಟಿಯಲ್ಲಿ ಎರಡನೇ ಪಂದ್ಯ ಹಾಗೂ ಮಂಗಳವಾರ ಇಂದೋರ್ನಲ್ಲಿ ಮೂರನೇ ಟಿ 20 ಪಂದ್ಯ ನಡೆಯಲಿದೆ.
ಜಸ್ಪ್ರೀತ್ ಬುಮ್ರಾ ಅವರು ಗಾಯದಿಂದಾಗಿ ಇನ್ನು ಆರು ತಿಂಗಳು ಕ್ರಿಕೆಟ್ನಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಅಕ್ಟೋಬರ್ 16ರಿಂದ ನಡೆಯುವ ಟಿ-20 ವಿಶ್ವಕಪ್ನಿಂದಲೂ ಹೊರಗುಳಿದಿದ್ದಾರೆ. ಏಷ್ಯಾ ಕಪ್ ವೇಳೆಯೂ ಬೂಮ್ರಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದ್ದಿದ್ದರು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್.
ಇದನ್ನೂ ಓದಿ ;ಭಾರತ ತಂಡಕ್ಕೆ ಶಾಕ್..ಬೆನ್ನುಮೂಳೆ ಗಾಯದಿಂದ ಜಸ್ಪ್ರೀತ್ ಬೂಮ್ರಾ ವಿಶ್ವಕಪ್ನಿಂದ ಔಟ್