ಕರ್ನಾಟಕ

karnataka

ETV Bharat / sports

ಐಪಿಎಲ್‌ನಿಂದಾಗಿ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ: ವಾಸಿಂ ಅಕ್ರಮ್ - ETv Bharat news

ದ್ರಾವಿಡ್ ಅವರ ಹೇಳಿಕೆಯನ್ನು ಪ್ರಶ್ನಿಸಿ ಭಾರತವು ಸ್ವಂತ ಐಪಿಎಲ್ ನಿಂದ ಯಾವುದೇ T20 ವಿಶ್ವಕಪ್ ಯಶಸ್ಸನ್ನು ತಂಡಕ್ಕೆ ಒದಗಿಸಲು ವಿಫಲವಾಗಿದೆ ಎಂದು ಹೇಳಿದರು.

Pakistan legend Wasim Akram
ಪಾಕಿಸ್ತಾನದ ದಂತಕಥೆ ವಾಸಿಂ ಅಕ್ರಮ್

By

Published : Nov 12, 2022, 1:46 PM IST

ಆಸ್ಟ್ರೇಲಿಯಾ:ಅಡಿಲೇಡ್‌ನಲ್ಲಿ ನಡೆದ ಸೆಮಿ-ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಅಜೇಯ 86 ರನ್ ಗಳಿಸಿದ ಅಲೆಕ್ಸ್ ಹೇಲ್ಸ್ ಈ ವರ್ಷ ಇಂಗ್ಲೆಂಡ್ ಮೊದಲ ಆಯ್ಕೆಯ T20 ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ. ಅವರ ಆಟದ ನೆರವಿಂದ ಇಂಗ್ಲೆಂಡ್ ತಂಡವು 10 ವಿಕೆಟ್‌ಗಳಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಲು ನೆರವಾಯಿತು.

ನಂತರ ಮಾತನಾಡಿದ ಹೇಲ್ಸ್ ಭಾರತದ ದಾಳಿಯ ಮೇಲೆ ಪ್ರಭಾವ ಬೀರಲು ತನ್ನ ಬಿಗ್ ಬ್ಯಾಷ್ ಲೀಗ್ ಅನುಭವವನ್ನು ಹೆಚ್ಚು ಬಳಸಿದ್ದೇನೆ ಎಂದು ಹೇಳಿದರು. ದುರದೃಷ್ಟವಶಾತ್ ಭಾರತದ ಯಾವುದೇ ಆಟಗಾರರು ಇದುವರೆಗೆ ಯಾವುದೇ ಸಾಗರೋತ್ತರ ಲೀಗ್‌ಗಳಲ್ಲಿ ಭಾಗವಹಿಸಿಲ್ಲ. ಇದರ ಅನುಭವ ಕೊರತೆ ಅವರನ್ನು ಕಾಡುತ್ತಿದೆ. ಸೋಲಿನಿಂದ ಭಾರತವು ವಿಶ್ವಕಪ್ ಫೈನಲ್‌ನಲ್ಲಿ ಸ್ಥಾನ ಪಡೆದು ಮತ್ತು ಅವರ ಸುದೀರ್ಘ ಕನಸಿನ ಟ್ರೋಫಿ ಗೆಲ್ಲುವ ಬರವನ್ನು ಕೊನೆಗೊಳಿಸುವ ಅವಕಾಶವನ್ನು ಕಳೆದುಕೊಂಡ ನಂತರ ಮತ್ತೆ ಪ್ರಶ್ನೆಯನ್ನು ಎತ್ತಲಾಯಿತು.

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೋಲಿನ ನಂತರ ಮಾತನಾಡಿ ಅವರು ಆಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಬಹುದೆಂದು ಒಪ್ಪಿಕೊಂಡರು. ಆದರೆ ಇದು ಅವರ ಟೆಸ್ಟ್ ಕ್ರಿಕೆಟ್ ಸೆಟ್ ಅಪ್ ಅನ್ನು ಹಾನಿಗೊಳಿಸುತ್ತದೆ ಎಂದು ಹೇಳಿದರು. ಈ ಪಂದ್ಯದ ವೇಳೆ ಬಿಗ್ ಬ್ಯಾಷ್ ನಲ್ಲಿ ಆಡಿದ ಇಂಗ್ಲೆಂಡ್ ಆಟಗಾರರು ಬಂದು ಆಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಈ ಪಂದ್ಯಾವಳಿಗಳು ನಮ್ಮ ಋತುವಿನ ಉತ್ತುಂಗದಲ್ಲಿಯೇ ನಡೆಯುವುದರಿಂದ ಇದು ನಮಗೆ ದೊಡ್ಡ ಸವಾಲು ಎಂದರು. ನಮ್ಮ ಬಹಳಷ್ಟು ಹುಡುಗರು ಈ ಲೀಗ್‌ಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರೆ ಇದರ ನಿರ್ಧಾರವನ್ನು ತೆಗೆದುಕೊಳ್ಳುವುದು ಬಿಸಿಸಿಐಗೆ ಬಿಟ್ಟದ್ದು ಎಂದ ದ್ರಾವಿಡ್ ಹೇಳಿದರು.

ಕೆಲವೇ ಕ್ಷಣಗಳ ನಂತರ ಎ ಸ್ಪೋರ್ಟ್ಸ್‌ನಲ್ಲಿನ ಸಂಭಾಷಣೆಯಲ್ಲಿ ಪಾಕಿಸ್ತಾನದ ದಂತಕಥೆ ವಾಸಿಂ ಅಕ್ರಮ್ ಅವರು ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್ ಅವರ ಹೇಳಿಕೆಯನ್ನು ಪ್ರಶ್ನಿಸಿದರು. ಭಾರತವು ಸ್ವಂತ ಐಪಿಎಲ್ ನಿಂದಾಗಿ ಯಾವುದೇ T20 ವಿಶ್ವಕಪ್ ಯಶಸ್ಸನ್ನು ತಂಡಕ್ಕೆ ಒದಗಿಸಲು ವಿಫಲವಾಗಿದೆ ಎಂದು ಹೇಳಿದರು. ಭಾರತವು 2007 ರಲ್ಲಿ ಟಿ 20 ವಿಶ್ವಕಪ್ ಗೆದ್ದ ನಂತರ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಇದುವರೆಗೆ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ. ಹಾಗಾಗಿ ಪ್ರಶ್ನೆ ಉದ್ಭವಿಸುತ್ತವೆ ಎಂದು ಹೇಳಿದರು. ನಾನು ಸಂದರ್ಶನವನ್ನು ಕೇಳುತ್ತಿದ್ದೆ. ಅವರು ಸಾಗರೋತ್ತರ ಲೀಗ್‌ಗಳನ್ನು ಆಡಲು ಅನುಮತಿಸಿದರೆ ಭಾರತದ ವಿಧಾನವು ಬದಲಾಗುತ್ತದೆಯೇ? ಎಂದರು.

ಇದನ್ನೂ ಓದಿ:T20 ವಿಶ್ವಕಪ್​ ಪೈನಲ್​ ಪಂದ್ಯಕ್ಕೆ​​ ಶೇ. 95ರಷ್ಟು ಮಳೆಯ ಕಾಟ: ಟ್ರೋಫಿ ಹಂಚಿಕೊಳ್ಳುವ ಅನಿವಾರ್ಯತೆಯಲ್ಲಿ ಉಭಯ ತಂಡಗಳು

ABOUT THE AUTHOR

...view details