ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದೂಡಲ್ಪಟ್ಟಿದ್ದು ಭಾರತದಿಂದ ನಿರ್ಗಮಿಸುತ್ತಿರುವ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ಕಮೆಂಟರ್ ಸೈಮನ್ ಡೌಲ್ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಹೃದಯಸ್ಪರ್ಶಿ ಸಂದೇಶ ನೀಡಿದ್ದಾರೆ.
"ಭಾರತ, ನೀವು ಇಷ್ಟು ವರ್ಷಗಳಲ್ಲಿ ನನಗೆ ತುಂಬಾ ಕೊಟ್ಟಿದ್ದೀರಿ. ಇಂತಹ ಸಂದಿಗ್ಧ ಸಮಯದಲ್ಲಿ ನಿಮ್ಮನ್ನು ಬಿಟ್ಟು ಹೋಗುತ್ತಿರುವ ಬಗ್ಗೆ ನನಗೆ ಬೇಸರವಿದೆ. ಯಾರೆಲ್ಲ ಸಮಸ್ಯೆಯಿಂದ ಬಳಲುತ್ತಿದ್ದೀರೋ ಅವರೊಂದಿಗೆ ನನ್ನ ಹೃದಯವಿದೆ. ನೀವು ಏನು ಮಾಡಲು ಬಯಸುತ್ತೀರೋ, ಅದನ್ನು ಸುರಕ್ಷತೆಯಿಂದ ಮಾಡಿ. ಮುಂದಿನ ಅವಧಿಯವರಿಗೆ ಕಾಳಜಿಯಿಂದ ಇರಿ" ಎಂದು ಡೌಲ್ ಟ್ವೀಟ್ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಭಾಗವಹಿಸಿದ ಅನೇಕ ನ್ಯೂಜಿಲೆಂಡ್ ಆಟಗಾರರಲ್ಲಿ ಡೌಲ್ ಕೂಡ ಒಬ್ಬರು. ಕೇನ್ ವಿಲಿಯಮ್ಸನ್, ಕೈಲ್ ಜೇಮಿಸನ್ ಮತ್ತು ಟ್ರೆಂಟ್ ಬೌಲ್ಟ್ ಐಪಿಎಲ್ನಲ್ಲಿರುವ ಕೆಲ ಪ್ರಮುಖ ಕಿವೀಸ್ ಆಟಗಾರರಾಗಿದ್ದಾರೆ.