ಮುಂಬೈ:ರೋಹಿತ್ ಮತ್ತು ರಾಹುಲ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಆರಂಭಿಕ ಸ್ಥಾನ ಪಡೆದಿರುವ ಶುಬ್ಮನ್ಗಿಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುವ ಕ್ರಿಕೆಟ್ ದಂತಕತೆ ಸಚಿನ್, ಯುವ ಬ್ಯಾಟರ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಹೊಂದಿರುವುದಾಗಿ ತಮ್ಮ ಪ್ರದರ್ಶನ ಮೂಲಕವೇ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶುಬ್ಮನ್ ಗಿಲ್ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ 52 ರನ್ ಗಳಿಸಿ, ಶತಕದತ್ತ ಮುನ್ನುಗ್ಗುತ್ತಿರುವಾಗ ಕೈಲ್ ಜೇಮಿಸನ್ಗೆ ವಿಕೆಟ್ ಒಪ್ಪಿಸಿದ್ದರು. ಇದೀಗ ಮುಂಬೈನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ 44 ರನ್ಗಳಿಸಿದ ಲೆಫ್ಟ್ ಆಫ್ ಸ್ಪಿನ್ನರ್ ಅಜಾಜ್ ಪಟೇಲ್ಗೆ ವಿಕೆಟ್ ಒಪ್ಪಿಸಿದ್ದರು.
ಎರಡೂ ಟೆಸ್ಟ್ ಪಂದ್ಯಗಳ ಪ್ರದರ್ಶನವನ್ನು ನೋಡಿದರೆ ಶುಬ್ಮನ್ ಗಿಲ್ ಮುಂದಿನ ದಕ್ಷಿಣ ಆಫ್ರಿಕಾದಲ್ಲಿ ಒಂದು ವೇಳೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ಸಚಿನ್ ತೆಂಡೂಲ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
" ತಂತ್ರಗಾರಿಕೆ ವಿಷಯಕ್ಕೆ ಬಂದರೆ, ವಿಭಿನ್ನವಾದ ಪಿಚ್ಗಳು ನಿಮ್ಮನ್ನು ವಿಭಿನ್ನವಾಗಿ ಪರೀಕ್ಷಿಸುತ್ತವೆ. ನಾವು ಆಸ್ಟ್ರೇಲಿಯಾದಲ್ಲಿ ಬ್ರಿಸ್ಬೇನ್ ಟೆಸ್ಟ್ ಗೆದ್ದದ್ದನ್ನು ಇನ್ನಿಂಗ್ಸ್ನಲ್ಲಿ ಶುಬ್ಮನ್ ಗಿಲ್(91) ಅವರು ನಿರ್ಣಾಯಕ ಇನ್ನಿಂಗ್ಸ್ ಗಮನಿಸಿದರೆ, ಅವರು ಎಂತಹ ಪರಿಸ್ಥಿತಿಯಲ್ಲೂ ಆಡುವ ಅನುಕೂಲತೆ ಹೊಂದಿದ್ದಾರೆ "ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತೆಂಡೂಲ್ಕರ್ ಹೇಳಿದ್ದಾರೆ.
" ಗಿಲ್ ಕಠಿಣ ಮತ್ತು ಬೌನ್ಸಿ ಟ್ಯ್ರಾಕ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರು ಅಂತಹ ಪಿಚ್ಗಳಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಅವರಲ್ಲಿ ಯಾವುದೇ ತಂತ್ರಗಾರಿಯ ದೋಷಗಳಿವೆ ಎಂದು ನನಗನ್ನಿಸುವುದಿಲ್ಲ" ಎಂದಿದ್ದಾರೆ.