ಕೋಲ್ಕತ್ತಾ:ವಿಶ್ವಕಪ್ ಬಳಿಕ ನ್ಯೂಜಿಲ್ಯಾಂಡ್ ಏಕದಿನ, ಟಿ20 ಸರಣಿಗೆ ಆಯ್ಕೆಯಾಗಿರುವ ಭಾರತದ ಬ್ಯಾಟರ್ ಶುಭ್ಮನ್ ಗಿಲ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದರಿಂದ ಪಂಜಾಬ್ ತಂಡ ಕರ್ನಾಟಕ ವಿರುದ್ಧ 9 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿತು. ಅಲ್ಲದೇ, ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾದ ದಿನದ ಬಳಿಕ ಗಿಲ್ ಈ ಸಾಧನೆ ಮಾಡಿರುವುದು ಆಯ್ಕೆ ಸಮಿತಿಯ ನಂಬಿಕೆ ಉಳಿಸಿಕೊಂಡಂತಾಗಿದೆ.
ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 55 ಎಸೆತಗಳಲ್ಲಿ 126 ರನ್ ಗಳಿಸಿದ ಶುಭಮನ್ ಗಿಲ್ ಮೊದಲ ಟಿ20 ಶತಕ ಗಳಿಸಿದರು. ಪಂಜಾಬ್ ನಿಗದಿತ ಓವರ್ನಲ್ಲಿ 4 ವಿಕೆಟ್ಗೆ 225 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ಗೆ ಗಿಲ್ ವೈಭವದ ಶತಕದ ಇನಿಂಗ್ಸ್ ಕಟ್ಟಿದರು. ಗಿಲ್ ಬ್ಯಾಟ್ನಿಂದ 11 ಬೌಂಡರಿ, 9 ಸಿಕ್ಸರ್ಗಳು ಸಿಡಿದವು. ಇದಲ್ಲದೇ, ಅನ್ಮೋಲ್ ಪ್ರೀತ್ ಸಿಂಗ್ ಕೂಡ ಸಿಡಿದು 59 ರನ್ ಗಳಿಸಿದರು. ಕೊನೆಯಲ್ಲಿ ಸನ್ವೀರ್ ಸಿಂಗ್ರ 27 ರನ್ಗಳಿಂದ ತಂಡ ಒಟ್ಟಾರೆ 225 ರನ್ಗಳ ಶಿಖರ ಕಟ್ಟಿತು.