ನವದೆಹಲಿ: ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರ ಆಗಿದ್ದಾರೆ. ಭಾರತದ ಮೂರು ಮಾದರಿಯ ತಂಡದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹೀಗಾಗಿ ಗಿಲ್ನ್ನು "ಪ್ರಿನ್ಸ್" ಎಂದೇ ಕರೆಯಲಾಗುತ್ತಿದೆ. ವಿರಾಟ್ ನಂತರ ಭಾರತ ತಂಡದಲ್ಲಿ ಉತ್ತಮ ಬ್ಯಾಟರ್ ಆಗಿ ಬೇಳೆಯಲಿದ್ದಾರೆ ಎಂದು ದಿಗ್ಗಜ ಆಟಗಾರರು ಅಭಿಪ್ರಾಯ ಪಡುತ್ತಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಗಿಲ್ ತಮ್ಮ ಮೊನಚಾದ ಪ್ರದರ್ಶನವನ್ನು ತಂಡದಲ್ಲಿ ನೀಡುತ್ತಿದ್ದಾರೆ. ಇದೇ ತಿಂಗಳಾಂತ್ಯದಿಂದ ಆರಂಭವಾಗಲಿರುವ ಏಷ್ಯಾಕಪ್ನಲ್ಲಿ ರೋಹಿತ್ ಶರ್ಮಾ ಅವರ ಜೊತೆಗೆ ಆರಂಭಿಕರಾಗಿ ಮೈದಾನಕ್ಕಿಳಿಯಲಿದ್ದಾರೆ. ಇದಲ್ಲದೇ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮತ್ತು ವಿಶ್ವಕಪ್ನಲ್ಲೂ ಆರಂಭಿಕರಾಗಿ ತಂಡದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಎಲ್ಲ ಏಕದಿನ ಸರಣಿಯಲ್ಲಿ ಗಿಲ್ ಬ್ಯಾಟ್ನಿಂದ ದೊಡ್ಡ ಮೊತ್ತದ ನಿರೀಕ್ಷೆಯೇ ಇದೆ.
ಭಾರತ ತಂಡ ಮುಂದಿನ ಮೂರು ತಿಂಗಳ ಕಾಲ ಏಕದಿನ ಕ್ರಿಕೆಟ್ನಲ್ಲಿ ಸಕ್ರೀಯವಾಗಿರಲಿದ್ದು, ಇದಕ್ಕಾಗಿ ಆಟಗಾರರ ಫಿಟ್ನೆಸ್ ತಿಳಿದುಕೊಳ್ಳಲು ಯೋ-ಯೋ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಏಷ್ಯಾಕಪ್ಗೆ ತೆರಳುವ ತಂಡದ ಆಟಗಾರರು ಈ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪರೀಕ್ಷೆಯಲ್ಲಿ ಎಲ್ಲರೂ ಪಾಸ್ ಆಗಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಯ ಮೂಲಗಳು ತಿಳಿಸಿವೆ. ಇದರಲ್ಲಿ ವಿರಾಟ್ ಕೊಹ್ಲಿ 17.2 ಅಂಕವನ್ನು ಪಡೆದಿದ್ದಾರೆ. ಶುಭಮನ್ ಗಿಲ್ 18.7 ಅಂಕವನ್ನು ಪಡೆದು ಟಾಪ್ ಸ್ಕೋರರ್ ಎಂದು ತಿಳಿದು ಬಂದಿದೆ. ಬಿಸಿಸಿಐ 16.5 ಅನ್ನು ಅರ್ಹತಾ ಮಟ್ಟ ಎಂದು ಸೂಚಿಸಿತ್ತು.