ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಟೆಸ್ಟ್ ಕ್ರಿಕೆಟ್ನ ಎರಡನೇ ಪ್ರವಾಸದಲ್ಲಿ ಶುಭಮನ್ ಗಿಲ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳುವ ಅವರು ಕೆಂಪು ಚೆಂಡಿನ ವಿರುದ್ಧ ಚೇತೇಶ್ವರ ಪೂಜಾರ ಅವರ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ವರ್ಷ ಏಕದಿನ ಮತ್ತು ಟಿ20ಯಲ್ಲಿ ಉತ್ತಮ ಅಂಕಿ-ಅಂಶ ಹೊಂದಿರುವ 'ಪ್ರಿನ್ಸ್' ಟೆಸ್ಟ್ನಲ್ಲಿ ಗಮನಾರ್ಹವಾಗಿಲ್ಲ.
ಸೆಂಚುರಿಯನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೂ ಗಿಲ್ ವೈಫಲ್ಯತೆ ಎದುರಿಸಿದರು. ಅವರ ಬ್ಯಾಟಿಂಗ್ ಬಗ್ಗೆ ವಿಶ್ಲೇಷಿಸಿರುವ ದಿಗ್ಗಜ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ 'ಶುಭಮನ್ ಗಿಲ್ ಅವರು ಟೆಸ್ಟ್ ಕ್ರಿಕೆಟ್ ಆಡುವಾಗ ಸ್ವಲ್ಪ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸ ಮೊದಲ ಟೆಸ್ಟ್ನಲ್ಲಿ ಗಿಲ್ ಮೂರನೇ ಆಟಗಾರನಾಗಿ ಮೈದಾನಕ್ಕಿಳಿದು, ಎರಡು ಇನ್ನಿಂಗ್ಸ್ನಲ್ಲಿ ಕ್ರಮವಾಗಿ 2 ಮತ್ತು 26 ರನ್ ಗಳಿಸಿದ್ದಾರೆ. ಎರಡನೇ ಇನ್ನಿಂಗ್ಸ್ ವಿರಾಟ್ ನಂತರ ಎರಡನೇ ಹೆಚ್ಚಿನ ರನ್ ಗಳಿಸಿ ಬ್ಯಾಟರ್ ಗಿಲ್ ಆಗಿದ್ದರೂ ಉತ್ತಮ ಪ್ರದರ್ಶನ ಕಂಡುಬಂದಿಲ್ಲ. ಎರಡೂ ಇನ್ನಿಂಗ್ಸ್ನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡುತ್ತಿರುವ ನಾಂದ್ರೆ ಬರ್ಗರ್ ಅವರಿಗೆ ವಿಕೆಟ್ ಕೊಟ್ಟರು. ಮೊದಲ ಇನ್ನಿಂಗ್ಸ್ನಲ್ಲಿ ಟಿಪ್ ಕ್ಯಾಚ್ಗೆ ಬಲಿಯಾದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಆಕ್ರಮಣಕಾರಿ ಆಟ:"ನನ್ನ ಪ್ರಕಾರ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವಲ್ಪ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ. ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಹೋಲಿಸಿದರೆ ಟೆಸ್ಟ್ ಕ್ರಿಕೆಟ್ ಆಡುವಾಗ ಸ್ವಲ್ಪ ವ್ಯತ್ಯಾಸವಿದೆ. ವ್ಯತ್ಯಾಸವು ಚೆಂಡಿನಲ್ಲಿದೆ. ಕೆಂಪು ಚೆಂಡು ಬಿಳಿ ಚೆಂಡುಗಿಂತ ಸ್ವಲ್ಪ ಹೆಚ್ಚು ಚಲಿಸುತ್ತದೆ. ಗಾಳಿಯಲ್ಲಿ ಮತ್ತು ಪಿಚ್‌ನ ಹೊರಗೆ ಕೂಡ ಅದು ಸ್ವಲ್ಪ ಹೆಚ್ಚು ಪುಟಿದೇಳುತ್ತದೆ. ಅವರು ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.