ನವದೆಹಲಿ:ಬ್ಯಾಕ್ ಟು ಬ್ಯಾಕ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶುಭಮನ್ ಗಿಲ್ ಆಟಕ್ಕೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ತಲೆ ಬಾಗುತ್ತಿದ್ದಾರೆ. ಅಲ್ಲದೇ ಕ್ರಿಕೆಟ್ ದಿಗ್ಗಜರೂ ಸಹ ದ್ವಿಶತಕ ವೀರನ ರನ್ಗಳಿಕೆ ಬಗ್ಗೆ ಹೋಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಈಗ ಪಾಕಿಸ್ತಾನ ಆಟಗಾರ ಹಾಗು ಪಾಕಿಸ್ತಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಗಿಲ್ ಅವರನ್ನು ಜೂನಿಯರ್ ರೋಹಿತ್ ಶರ್ಮಾ ಎಂದು ಹೇಳುವ ಮೂಲಕ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಐಸಿಸಿ ರ್ಯಾಂಕಿಂಗ್ನಲ್ಲಿ 26ನೇ ಸ್ಥಾನದಲ್ಲಿರುವ ಗಿಲ್ ಅವರ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಮೀಜ್ ಮಾತನಾಡಿದ್ದಾರೆ. 'ಶುಭಮನ್ ಗಿಲ್ ಮಿನಿ - ರೋಹಿತ್ ಶರ್ಮಾ ಅವರಂತೆ ಕಾಣುತ್ತಾರೆ. ಅವರಿಗೆ ಸಾಕಷ್ಟು ಸಾಮರ್ಥ್ಯವಿದೆ. ಅವರ ಬಳಿ ಇನ್ನಷ್ಟೂ ಅವಕಾಶ ಹಾಗೂ ಸಮಯ ಇದೆ. ಅವರ ಬ್ಯಾಟಿಂಗ್ ಕೌಶಲ ಉತ್ತಮವಾಗಿದ್ದು, ದ್ವಿಶತಕದ ಆಟದಲ್ಲಿ ಅವರು ಪ್ರತೀ ಬಾಲ್ನ್ನು ಸರಿಯಾಗಿ ಎದುರಿಸಿದ್ದಾರೆ' ಎಂದು ಹೇಳಿದ್ದರೆ.
ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತದ ಐದನೇ ಬ್ಯಾಟರ್ ಆಗಿ ದ್ವಿಶತಕ ದಾಖಲಿಸಿದರು. ರಾಯ್‌ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ 109 ರನ್‌ಗಳ ಭಾರತದ ಯಶಸ್ವಿ ಚೇಸ್‌ನಲ್ಲಿ ಗಿಲ್ ಅಜೇಯ 40 ರನ್ ಗಳಿಸಿದರು. ರೋಹಿತ್ ಈ ಪಂದ್ಯದಲ್ಲಿ 51 ರನ್‌ಗಳೊಂದಿಗೆ ಅಗ್ರ ಸ್ಕೋರ್ ಮಾಡಿದ್ದರು. ' 109 ರನ್ ಗುರಿಯನ್ನು ಸುಲಭವಾಗಿ ಹಿಮ್ಮೆಟ್ಟಿಸಿತು ಇದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾರ ಬ್ಯಾಟಿಂಗ್. ಇಂಡಿಯನ್ ಟೀ ರೋಹಿತ್ ಅವರಂತಹ ಅತ್ಯುತ್ತಮ ಬ್ಯಾಟರ್ ಅನ್ನು ಹೊಂದಿದೆ. ಅವರು ಹುಕ್ ಮತ್ತು ಹೊಡೆತಗಳಿಗೆ ಅದ್ಭುತ ಸ್ಟ್ರೈಕರ್ ಆಗಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಜಾ ಹೇಳಿದರು.