ಮುಂಬೈ :ಶುಬ್ಮನ್ ಗಿಲ್ ಭಾರತ ತಂಡದ ಕ್ಲಾಸಿಕ್ ಬ್ಯಾಟರ್, ಟೆಸ್ಟ್ ತಂಡದಲ್ಲಿ ಈಗಾಗಲೇ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಯುವ ಬ್ಯಾಟರ್, ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಕೆಲ ಪಂದ್ಯಗಳಲ್ಲಿ ಲೋ ಸ್ಟ್ರೈಕ್ ರೇಟ್ನಿಂದ ಟೀಕೆಗೆ ಗುರಿಯಾಗುತ್ತಿದ್ದರು.
ಕೆಟ್ಟ ಹೊಡೆತಗಳಿಗೆ ಕೈ ಹಾಕದ ನೆಲದಲ್ಲೇ ಹೊಡೆದು ಬೌಂಡರಿ ಬಾರಿಸುತ್ತಿದ್ದ ಗಿಲ್ ಸ್ಟ್ರೈಕ್ ಬದಲಾವಣೆಯಲ್ಲಿ ಚುರುಕು ಪ್ರದರ್ಶನ ತೋರುತ್ತಿಲ್ಲ. ಹೆಚ್ಚು ಎಸೆತಗಳನ್ನು ವ್ಯರ್ಥ ಮಾಡುತ್ತಾರೆ ಎಂದು ಟೀಕಿಸಲಾಗುತ್ತಿತ್ತು. ಆದರೆ, ಈ ಬಾರಿ ಪಂಜಾಬ್ ಸ್ಟೈಲಿಷ್ ಬ್ಯಾಟರ್ ತಮ್ಮ ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ. ಆ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅದಕ್ಕೆ ಸೂಕ್ತ ಉದಾಹರಣೆಯೆಂದರೆ ಅವರು ಕಳೆದ ಎರಡು ಪಂದ್ಯಗಳಲ್ಲಿ 105 ಎಸೆತಗಳನ್ನೆದುರಿಸಿ ಬರೋಬ್ಬರಿ 180 ರನ್ಗಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಡಕ್ ಔಟ್ ಆಗಿದ್ದ 22 ವರ್ಷದ ರೈಟ್ ಹ್ಯಾಂಡ್ ಬ್ಯಾಟರ್, ನಂತರ ಎರಡು ಪಂದ್ಯಗಳಲ್ಲಿ ಕ್ರಮವಾಗಿ 84 ಮತ್ತು 96 ರನ್ಗಳಿಸಿದ್ದರು. ಡೆಲ್ಲಿ ವಿರುದ್ಧ 46 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 84 ರನ್ಗಳಿಸಿದರೆ, ನಿನ್ನೆ ಪಂಜಾಬ್ ವಿರುದ್ಧ 59 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 96 ರನ್ಗಳಿಸಿದರು.