ಕರ್ನಾಟಕ

karnataka

ETV Bharat / sports

ಶ್ರೀಲಂಕಾ ವಿರುದ್ಧ ಮಿಂಚಿದ್ದ ಶ್ರೇಯಸ್​ ಅಯ್ಯರ್​ಗೆ 'ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ' - New Zealand all-rounder Amelia Kerr

ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನಾಗಿರುವ ಅಮೆಲಿಯಾ ಕೆರ್​​ ವಿಶ್ವಕಪ್​ಗೂ ಮುನ್ನ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸುಪ್ರೀಂ ಪ್ರದರ್ಶನ ತೋರಿದ್ದರು. ಅವರು ಭಾರತ ಮಿಥಾಲಿ ರಾಜ್​, ದೀಪ್ತಿ ಶರ್ಮಾರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ..

Shreyas Iyer named ICC 'Player of the Month'
ಶ್ರೇಯಸ್​ ಅಯ್ಯರ್​ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

By

Published : Mar 14, 2022, 6:32 PM IST

ಮುಂಬೈ :ಭಾರತದ ಉದಯೋನ್ಮುಖ ಬ್ಯಾಟರ್ ಶ್ರೇಯಸ್​ ಅಯ್ಯರ್ ಫೆಬ್ರವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ಅಮೆಲಿಯಾ ಕೆರ್​ ಪಾತ್ರರಾಗಿದ್ದಾರೆ.

ಶ್ರೇಯಸ್​ ಅಯ್ಯರ್ ತವರಿನಲ್ಲಿ ನಡೆದ ವೆಸ್ಟ್​ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ವಿಂಡೀಸ್​ ವಿರುದ್ಧದ ಸರಣಿಯಲ್ಲಿ ತಲಾ ಒಂದು ಏಕದಿನ ಮತ್ತು ಟಿ20 ಪಂದ್ಯವನ್ನಾಡಿದ್ದ ಅಯ್ಯರ್, ಕ್ರಮವಾಗಿ 80 ಮತ್ತು 25 ರನ್​ಗಳಿಸಿದ್ದರು.

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಂದೂ ಪಂದ್ಯದಲ್ಲೂ ವಿಕೆಟ್ ಒಪ್ಪಿಸದೆ ದಾಖಲೆಯ 204ರನ್​ ಸಿಡಿಸಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಪಂದ್ಯಗಳಲ್ಲಿ ಕ್ರಮವಾಗಿ 57(28), 74(44) ಮತ್ತು 73(45) ರನ್​ಳಿಸಿದ್ದರು.

ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನಾಗಿರುವ ಅಮೆಲಿಯಾ ಕೆರ್​​ ವಿಶ್ವಕಪ್​ಗೂ ಮುನ್ನ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸುಪ್ರೀಂ ಪ್ರದರ್ಶನ ತೋರಿದ್ದರು. ಅವರು ಭಾರತ ಮಿಥಾಲಿ ರಾಜ್​, ದೀಪ್ತಿ ಶರ್ಮಾರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ.

ನ್ಯೂಜಿಲ್ಯಾಂಡ್​​ ಆಲ್​ರೌಂಡರ್ 117ರ ಸರಾಸರಿಯಲ್ಲಿ​ 353 ರನ್​ ಮತ್ತು 7 ವಿಕೆಟ್ ಪಡೆದಿದ್ದರು. 2ನೇ ಮತ್ತು 4ನೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ:ಆಸೀಸ್​ ವಿರುದ್ಧ ತವರಿನಲ್ಲೇ ಮುಖಭಂಗ ಅನುಭವಿಸಿದ ಪಾಕ್.. 148ಕ್ಕೆ ಆಲೌಟ್, 408 ರನ್​ಗಳ ಬೃಹತ್​ ಹಿನ್ನಡೆ..

ABOUT THE AUTHOR

...view details