ಬೆಂಗಳೂರು:ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡದ ಭಾಗವಾಗಿರುವುದರ ಬಗ್ಗೆ ಬಿಸಿಸಿಐ ಟಿವಿಯಲ್ಲಿ ಹಂಚಿಕೊಂಡಿದ್ದಾರೆ. ಗಾಯದಿಂದ ವೇಗವಾಗಿ ಚೇತರಿಸಿಕೊಂಡಿರುವುದರ ಬಗ್ಗೆ ಸ್ವತಃ ಅಯ್ಯರ್ ಅವರೇ ಸಂತೋಷ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 30ರಿಂದ ಪ್ರಾರಂಭವಾಗಲಿರುವ ಏಷ್ಯಾಕಪ್ ಮೂಲಕ ತಂಡಕ್ಕೆ ಅಯ್ಯರ್ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಸದ್ಯ ಏಷ್ಯಾಕಪ್ ಹಿನ್ನೆಲೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ವಿರಾಟ್ ಮತ್ತು ಅಯ್ಯರ್ 3 ಮತ್ತು ನಾಲ್ಕನೇ ಸ್ಥಾನಕ್ಕಾಗಿ ಜೊತೆಯಾಟ ಆಡುವ ಸಾಧ್ಯತೆ ಹೆಚ್ಚಿದೆ.
ಬಿಸಿಸಿಐ ಟಿವಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಯ್ಯರ್, "ತಂಡಕ್ಕೆ ಮರು ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಎಲ್ಲರೂ ಕಮ್ಬ್ಯಾಕ್ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಎಲ್ಲಾ ಆಟಗಾರರು ತೋರಿದ ಸಹಾನುಭೂತಿ ಅದ್ಭುತವಾಗಿದೆ. ತಮ್ಮ ತಂಡದಲ್ಲಿ ಆಡಲು ರೋಮಾಂಚನಗೊಂಡಿದ್ದೇನೆ" ಎಂದಿದ್ದಾರೆ.
"ನಾನು ಸ್ಲಿಪ್ ಡಿಸ್ಕ್ ನಿಂದ ಬಳಲುತ್ತಿದ್ದೆ, ಅದು ನನ್ನ ನರವನ್ನು ಸಂಕುಚಿತಗೊಳಿಸುತ್ತಿತ್ತು ಮತ್ತು ನೋವು ಪಾದಗಳಲ್ಲಿ ನೋವನ್ನು ಅನುಭವಿಸುತ್ತಿದ್ದೆ. ಆ ಸಮಯದಲ್ಲಿ ಅಸಹನೀಯ ನೋವನ್ನು ಅನುಭವಿಸಿದೆ. ಆದರೆ ಇದರ ಬಗ್ಗೆ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಆಗ ಆಟವಾಡಲು ಕಷ್ಟವಾಗುತ್ತಿತ್ತು. ನೋವಿನ ಉಪಶಮನಕ್ಕೆ ಮಾತ್ರೆ ಅಥವಾ ಚುಚ್ಚು ಮದ್ದನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ನಂತರ ಪಡೆದ ಸಲಹೆಯಂತೆ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅಗತ್ಯ ಎಂದು ಫಿಸಿಯೋ ಹೇಳಿದ್ದರು. ನಂತರ ಮನೆಗೆ ತೆರಳಿ ಹತ್ತು ದಿನದ ವಿಶ್ರಾಂತಿ ಮಾಡಿದೆ. ವೈದ್ಯರೊಬ್ಬರು ಮೈದಾನಕ್ಕಳಿಯಬಹುದು ಆದರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದರು. ಅದರಂತೆ ನಿರ್ಧಾರ ಮಾಡಿ ಇಂಗ್ಲೆಂಡ್ಗೆ ತೆರಳಿದೆ."