ಕಟಕ್: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲೂ ಭಾರತ ಸೋಲನುಭವಿಸಿದ್ದು, ಕ್ರೀಡಾಭಿಮಾನಿಗಳ ಆಸೆಗೆ ಮತ್ತೆ ನಿರಾಸೆ ತಂದಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ಗಳ ಸಾಧರಣ ಮೊತ್ತ ಕಲೆ ಹಾಕಿತ್ತು. ಈ ಅಲ್ಪ ಮೊತ್ತ ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ ಕೇವಲ 18.2 ಓವರ್ಗಳಲ್ಲಿ 149 ರನ್ ಮಾಡಿ ನಿರಾಯಾಸ ಗೆಲುವು ಸಾಧಿಸಿತು. ಆದರೆ, ವಿಧಿಲಿಖಿತ ಎಂಬಂತೆ ಕ್ರೀಡಾಂಗಣದಲ್ಲಿ ತಾವು ತೆಗೆದುಕೊಂಡಿದ್ದ ಕೆಲವು ನಿರ್ಧಾರಗಳು ಕೈಕೊಟ್ಟಿದ್ದು ಅಗ್ರ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸರಣಿ ಸೋಲು ಹಾಗೂ ಈ ಟಿ-20 ಪಂದ್ಯದಲ್ಲಿ ಬದಲಾದ ದಿಢೀರ್ ನಿರ್ಧಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್‌ಗೂ ಮುನ್ನ ಅಕ್ಷರ್ ಪಟೇಲ್ ಅವರನ್ನು ಬಾಟಿಂಗ್ ಮಾಡಲು ಕಳಿಸಲು ಕಾರಣವೇನು ಅನ್ನೋದನ್ನು ಬಹಿರಂಗಪಡಿಸಿದ್ದಾರೆ. ಇದು ಅವರನ್ನು (ದಿನೇಶ್ ಕಾರ್ತಿಕ್) ಬಿಟ್ಟು ಇವರನ್ನು (ಅಕ್ಷರ್ ಪಟೇಲ್) ಕಳಿಸಿದ್ದು ವಿಚಿತ್ರವಾಗಿ ಕಾಣಿಸಬಹುದು. ಆದರೆ, ಸಿಂಗಲ್ಸ್ ಹಾಗೂ ಡಬಲ್ಸ್ ರೊಟೇಟ್ ಮಾಡಬೇಕಾದ ಸನ್ನಿವೇಶ ಇದ್ದುದ್ದರಿಂದ ದಿನೇಶ್ ಕಾರ್ತಿಕ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಬೇಗ ಕ್ರೀಸ್‌ಗೆ ಕಳುಹಿಸಲಾಗಿತ್ತು.
ಇದು ಮೊದಲೇ ತೆಗೆದುಕೊಂಡ ನಿರ್ಧಾರ:ಕಾರಣ ಇದು ನಾವು ಮೊದಲೇ ತೆಗೆದುಕೊಂಡಿದ್ದ ನಿರ್ಧಾರವಾಗಿತ್ತು. 6-7 ಓವರ್‌ಗಳು ಬಾಕಿ ಇದ್ದಾಗ ಸಿಂಗಲ್ಸ್ ಹಾಗೂ ಡಬಲ್ಸ್ ಮೂಲಕ ಸ್ಟ್ರೈಕ್ ರೊಟೇಟ್ ಮಾಡಬೇಕಾದ ಆಟಗಾರನ ಅಗತ್ಯವಿತ್ತು. ಆ ವೇಳೆ ಬೌಂಡರಿಯಾಗಲಿ ಅಥವಾ ಚೆಂಡನ್ನು ಕ್ರೀಸ್ನಿಂದ ಹೊರಗಟ್ಟುವ ದಾಂಡಿಗ ಆಗಲಿ ಆಗ ಅಗತ್ಯವಿರಲಿಲ್ಲ. ಸಿಂಗಲ್ ಗಳಿಸಿ ತಂಡಕ್ಕೆ ಆಸರೆಯಾದರೆ ಸಾಕು ಎಂಬುವುದಾಗಿತ್ತು. ಈ ಹಿನ್ನೆಲೆ ಅಕ್ಷರ್ ಪಟೇಲ್ ಅವರನ್ನು ಬೇಗ ಬ್ಯಾಟಿಂಗ್‌ಗೆ ಇಳಿಸಲಾಗಿತ್ತು ಎಂದು ಶ್ರೇಯಸ್ ಅಯ್ಯರ್ ತಾವು ತೆಗೆದುಕೊಂಡ ನಿರ್ಧಾರ ಬಗ್ಗೆ ಸ್ಪಷ್ಟನೆ ನೀಡಿದರು.