ನವದೆಹಲಿ:ವಿಶ್ವಕಪ್ಗೆ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರಲ್ಲಿ ಹೆಚ್ಚು ಬ್ಯಾಟಿಂಗ್ಗೆ ಒತ್ತು ಕೊಡಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತನಾಡಿದ್ದು, ಮೊದಲ ಐದು ಬ್ಯಾಟರ್ಗಳು ಮಾಡಲಾಗದ್ದನ್ನು ಕೆಳ ಕ್ರಮಾಂಕದ ಬ್ಯಾಟರ್ಗಳು ಮಾಡಬೇಕು ಎಂಬ ಲೆಕ್ಕಾಚಾರ ಎಷ್ಟು ಸರಿ, ಈ ಹಿನ್ನೆಲೆಯಲ್ಲಿ ಬೌಲರ್ಗಳನ್ನು ಕೈಬಿಟ್ಟಿರುವುದು ಸರಿ ಅಲ್ಲ ಎಂದು ಅವರು ಸ್ಟಾರ್ ಸ್ಪೋರ್ಟ್ಸ್ನ ಆನ್ಲೈನ್ ವೇದಿಕೆಯಲ್ಲಿ ಚರ್ಚಿಸಿದ್ದಾರೆ.
ತಂಡದಲ್ಲಿ ಯುಜುವೇಂದ್ರ ಚಹಾಲ್ಗೆ ಅವಕಾಶ ಸಿಗದಿರುವುದು ಅಚ್ಚರಿಯ ಸಂಗತಿ ಎಂದಿದ್ದಾರೆ. ಯುಜುವೇಂದ್ರ ಚಹಾಲ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದು ನನ್ನ ತಿಳಿವಳಿಕೆಯನ್ನು ಮೀರಿದೆ. ಭಾರತ ತಂಡ 150-200ಕ್ಕೆ ಔಟಾದಾಗ ಎದುರಾಳಿಯನ್ನು ಸಮರ್ಥವಾಗಿ ಕಟ್ಟಿಹಾಕಲು ಬೌಲರ್ಗಳ ಅಗತ್ಯ ಇದೆ. ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡುವುದರ ಅರ್ಥವೇನು? ಅಗ್ರ ಐವರು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ಏಳು ಮತ್ತು ಎಂಟನೇ ಕ್ರಮಾಂಕದಲ್ಲಿರುವ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಾರೆ? ಭಾರತ ಬೌಲರ್ಗಳನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಅಖ್ತರ್ ಹೇಳಿದ್ದಾರೆ.
ಅಕ್ಟೋಬರ್ 14 ರಂದು ಅಹಮದಾಬಾದ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚಿನ ಒತ್ತಡ ಇರಲಿದೆ ಎಂದಿದ್ದಾರೆ. ಈ ಒತ್ತಡದ ಕಾರಣ ಭಾರತವನ್ನು ಪಾಕಿಸ್ತಾನ ಸುಲಭವಾಗಿ ಮಣಿಸಲಿದೆ. ಪ್ರತಿ ಆಟಗಾರ ಮತ್ತು ನಾಯಕ ರೋಹಿತ್ ಶರ್ಮಾಗೆ ಹೆಚ್ಚಿನ ಒತ್ತಡ ಇರಲಿದೆ. ಇದನ್ನೇ ಪಾಕ್ ಲಾಭ ಮಾಡಿಕೊಂಡು ಪ್ರಶಸ್ತಿ ಗೆಲ್ಲಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.