ಕರ್ನಾಟಕ

karnataka

ETV Bharat / sports

Virat Kohli: ವಿರಾಟ್​ ಕೊಹ್ಲಿ ಶ್ರೇಷ್ಠ ಆಟಗಾರ, ಬಾಬರ್​ ಆ ಹಾದಿಯಲ್ಲಿ ಇದ್ದಾರೆ: ಶೋಯೆಬ್ ಅಖ್ತರ್ - ETV Bharath Kannada news

ವಿರಾಟ್​​ ಮತ್ತು ಬಾಬರ್​ ನಡುವಿನ ಹೋಲಿಗೆ ವಿಶ್ವ ಕ್ರಿಕೆಟ್​ನಲ್ಲಿ ಸಾಮಾನ್ಯ, ಈ ಬಗ್ಗೆ ಹರ್ಭಜನ್​ ಸಿಂಗ್​ ತಮ್ಮ ಯೂಟ್ಯೂಬ್​ ಚಾನಲ್​ನ ಸಂದರ್ಶನದಲ್ಲಿ ಶೋಯೆಬ್ ಅಖ್ತರ್ ಬಳಿ ಕೇಳಿದಾಗ ವಿರಾಟ್​ ಶ್ರೇಷ್ಠ ಆಟಗಾರ ಎಂದು ಹೇಳಿದ್ದಾರೆ.

Etv BVirat Kohli greatest
Virat Kohli greatest

By

Published : Jul 4, 2023, 1:50 PM IST

ಕ್ರಿಕೆಟ್​​ನ ಶ್ರೇಷ್ಠ ಆಟಗಾರರ ಪಟ್ಟಿಯನ್ನು ಮಾಡಿದರೆ ಅದರಲ್ಲಿ ಭಾರತದ ಬ್ಯಾಟರ್​​ ವಿರಾಟ್​ ಕೊಹ್ಲಿ ಹೆಸರು ಸೇರಿಸದೇ ಇರಲು ಸಾಧ್ಯವಿಲ್ಲ. ಏಕೆಂದರೆ ಕ್ರಿಕೆಟ್​ನ ಮೂರು ವಿಭಾಗದಲ್ಲಿ ಅವರು ತಮ್ಮನ್ನು ಆ ಮಟ್ಟಿಗೆ ಸಾಬೀತು ಮಾತು ಮಾಡಿಕೊಂಡಿದ್ದಾರೆ. ಅವರು ಬ್ಯಾಟಿಂಗ್​ ದಾಖಲೆಗಳು ವಿರಾಟ್​ ಅವರ ಆಟಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗದು. ಆದರೆ ವಿರಾಟ್​ ಅವರನ್ನು ಇತರ ಬ್ಯಾಟರ್​ಗಳಿಗೆ ಹೋಲಿಕೆ ಮಾಡುವುದು ಸಾಮಾನ್ಯವಾಗಿದೆ.

ಪ್ರಸ್ತುತ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ವರ್ಸಸ್ ಬಾಬರ್ ಅಜಮ್ ಹೆಚ್ಚು ಚರ್ಚೆಯ ವಿಷಯವಾರ್ಗಿದೆ. ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಶ್ರೇಷ್ಠ ಆಟಗಾರರು. ಈ ಇಬ್ಬರು ಆಟಗಾರರ ಹೋಲಿಕೆ ಇತ್ತೀಚೆಗೆ ಅಭಿಮಾನಿಗಳು ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಬರುವ ಟ್ರೆಂಡಿಂಗ್​ ವಿಷಯದಲ್ಲಿ ಇದೂ ಒಂದು.

ಈಗ ಪಾಕಿಸ್ತಾನದ ಮಾಜಿ ಬೌಲರ್​ ಶೋಯೆಬ್ ಅಖ್ತರ್ ಅವರು ಈ ಹೋಲಿಕೆಯ ವಿಚಾರದ ಪ್ರಶ್ನೆಗೆ ವಿರಾಟ್​​ರನ್ನು ಶ್ರೇಷ್ಠ ಎಂದು ಹೊಗಳಿದ್ದಾರೆ. ಈ ಹಿಂದೆಯೂ ಶೋಯೆಬ್‌ ಅಖ್ತರ್‌ ಭಾರತದ ಮಾಜಿ ನಾಯಕ ಕೊಹ್ಲಿಯನ್ನು ಉತ್ತಮ ಅಭಿಪ್ರಾಯಗಳನ್ನು ಮತ್ತೆ ಮೆಚ್ಚುಗೆಯನ್ನು ಸೂಚಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಅಜಮ್​ ಮತ್ತು ಕೊಹ್ಲಿ ನಡುವೆ ಯಾರು ಹೆಚ್ಚು ಎಂಬ ಪ್ರಶ್ನೆಗೆ ವಿರಾಟ್​ ಕಡೆಗೆ ತಮ್ಮ ಮೆಚ್ಚುಗೆ ತಿಳಿಸಿದ್ದಾರೆ.

ಇತ್ತೀಚೆಗೆ, ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶೋಯೆಬ್ ಅಖ್ತರ್ ಜೊತೆಗೆ ಮಾಡಿ ಚಿಟ್ ಚ್ಯಾಟ್​ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬಾಬರ್​ ಮತ್ತು ವಿರಾಟ್​ ಬಗ್ಗೆ ಕೇಳಿದ್ದಾರೆ. ಆಗ ಅಖ್ತರ್​ "ವಿರಾಟ್ ಕೊಹ್ಲಿ ಶ್ರೇಷ್ಠ ಮತ್ತು ಬಾಬರ್ ಅಜಮ್ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುವ ತಯಾರಿಯಲ್ಲಿದ್ದಾರೆ. ಅವರು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ. ಜನರು ವಿನಾಕಾರಣ ಅವರಿಬ್ಬರನ್ನು ಹೋಲಿಕೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಕೂಡ ಅಖ್ತರ್​​ ಹೇಳಿಕೆಯನ್ನು ಸಮ್ಮತಿಸಿದ್ದು,"ವಿರಾಟ್ ಕೊಹ್ಲಿ ತನ್ನನ್ನು ತಾನು ಶ್ರೇಷ್ಠ ಎಂದು ಸ್ಥಾಪಿಸಿಕೊಂಡಿದ್ದಾರೆ. ಆದರೆ ಬಾಬರ್ ಆ ಸ್ಥಾನ ಹೋಗಲು ಇನ್ನೂ ಬಹಳಷ್ಟು ಮಾಡಬೇಕಾಗಿದೆ. ಅವರು ಒಂದು ದಿನ ಅಲ್ಲಿಗೆ ತಲುಪುತ್ತಾರೆ. ಏಕೆಂದರೆ ಅವರು ಅದ್ಭುತ ಆಟಗಾರ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತುಂಬಾ ಒಳ್ಳೆಯ ಆಟಗಾರ, ಆದರೆ ಬಹುಶಃ ಟಿ 20ಗೆ ಇನ್ನೂ ಒಗ್ಗಿಕೊಂಡಿಲ್ಲ. ಮೂರು ಮಾದರಿಯಲ್ಲಿ ತಮ್ಮನ್ನು ಸಾಬೀತು ಮಾಡಿಕೊಳ್ಳುವ ಅಗತ್ಯವಿದೆ" ಎಂದಿದ್ದಾರೆ.

ಅಂಕಿಅಂಶಗಳ ಪ್ರಕಾರ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಸಾಧಿಸಿದ್ದರ ಸಮೀಪಕ್ಕೆ ಬರಲು ಬಾಬರ್​ ಮೈದಾನದಲ್ಲಿ ಬಹಳಷ್ಟ ಪಂದ್ಯಗಳನ್ನು ಆಡಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 75 ಶತಕಗಳನ್ನು ಗಳಿದ್ದು, 25,385 ರನ್‌ ಕಲೆಹಾಕಿದ್ದಾರೆ. ಬಾಬರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 30 ಶತಕ ಗಳಿಸಿದ್ದು 12,270 ರನ್​ ಮಾಡಿದ್ದಾರೆ.

ಇದನ್ನೂ ಓದಿ:World Cup Qualifiers: ಒಮಾನ್​ ವಿರುದ್ಧ ನೆದರ್ಲ್ಯಾಂಡ್ಸ್‌ಗೆ ಗೆಲುವು; ಇಂದು ಜಿಂಬಾಬ್ವೆಗೆ ನೇರ ಅರ್ಹತೆಯ ಅವಕಾಶ!

ABOUT THE AUTHOR

...view details