ಮುಂಬೈ:ಟೀಂ ಇಂಡಿಯಾ ಆಲ್ರೌಂಡರ್ ಶಿವಂ ದುಬೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ದೀರ್ಘಕಾಲದ ಗೆಳತಿ ಅಂಜುಂ ಖಾನ್ ಜೊತೆ ಮದುವೆ ಮಾಡಿಕೊಂಡಿದ್ದಾರೆ. ವಿವಾಹ ಸಮಾರಂಭದ ಕೆಲವೊಂದು ಫೋಟೋ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ ಪ್ರೀತಿಗಿಂತಲೂ ಹೆಚ್ಚಾಗಿರುವುದನ್ನ ನಾವು ಪ್ರೀತಿಯಿಂದ ಪ್ರೀತಿಸಿದೆವು. ಎಂದೆಂದಿಗೂ ಮುಗಿಯದ ಸಂಬಂಧಕ್ಕೆ ಇದೀಗ ಅಧಿಕೃತ ಆರಂಭ ಸಿಕ್ಕಿದೆ.. ಜಸ್ಟ್ ಮ್ಯಾರೀಡ್ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಜೋಕಾಲಿ ಆಡುವಾಗ ಕುತ್ತಿಗೆಗೆ ಸಿಕ್ಕಿಕೊಂಡ ಸೀರೆ... ಬಾಲಕ ದುರ್ಮರಣ
ಟೀಂ ಇಂಡಿಯಾ ಪರ 2019ರಲ್ಲಿ ಏಕೈಕ ಏಕದಿನ ಪಂದ್ಯವನ್ನಾಡಿರುವ ಶಿವಂ ದುಬೆ ಇಲ್ಲಿಯವರೆಗೆ ಟಿ20ಯಲ್ಲಿ ಭಾರತದ ಪರ 13 ಪಂದ್ಯಗಳನ್ನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈ ಹಿಂದೆ ಬೆಂಗಳೂರು ತಂಡದ ಪರ ಆಡಿದ್ದ 28 ವರ್ಷದ ಪ್ಲೇಯರ್ ಇದೀಗ ರಾಜಸ್ಥಾನ ರಾಯಲ್ಸ್ ಪಡೆದ ಪರ ಕಣಕ್ಕಿಳಿಯುತ್ತಿದ್ದಾರೆ. ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಾರ ಗೊತ್ತಾಗುತ್ತಿದ್ದಂತೆ ಶ್ರೇಯಸ್ ಅಯ್ಯರ್, ಸಿದ್ದೇಶ್ ಲಾಡ್ ಹಾಗೂ ಪ್ರಿಯಾಂಕ ಪಾಚಾಲ್ ಟ್ವಿಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಐಪಿಎಲ್ ಪ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಕೂಡ ವಿಶ್ ಮಾಡಿದೆ.