ಕರ್ನಾಟಕ

karnataka

ETV Bharat / sports

IPLನಲ್ಲಿ ರನ್‌ 'ಶಿಖರ': ಸತತ 6ನೇ ಐಪಿಎಲ್​ನಲ್ಲೂ 400 ರನ್​ ಗಡಿದಾಟಿದ ಡೆಲ್ಲಿ ಓಪನರ್‌ - Delhi capitals

ಧವನ್​ 2016ರಿಂದ ನಡೆಯುತ್ತಿರುವ ಐಪಿಎಲ್‌ ಪಂದ್ಯಾವಳಿಗಳಲ್ಲಿ ಕ್ರಮವಾಗಿ 501, 479, 497, 521, 618 ಮತ್ತು ಈ ವರ್ಷ ಈಗಾಗಲೇ 422 ರನ್​ಗಳಿಸಿ ಮುನ್ನುಗ್ಗುತ್ತಿದ್ದಾರೆ.

Shikhar Dhawan scored 6th consecutive 400+ Runs In IPL
ಶಿಖರ್ ಧವನ್

By

Published : Sep 23, 2021, 5:02 PM IST

ದುಬೈ: ಬುಧವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಓಪನರ್​ ಶಿಖರ್ ಧವನ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದ ಮೂಲಕ ಅವರು ಸತತ 6 ಐಪಿಎಲ್​ನಲ್ಲೂ 400 ರನ್​ಗಳ ಗಡಿ ದಾಡಿದ ವಿಶೇಷ ದಾಖಲೆ ಬರೆದರು.

ಸನ್​ರೈಸರ್ಸ್​ ಹೈದರಾಬಾದ್​ ಮೊದಲು ಬ್ಯಾಟಿಂಗ್ ಮಾಡಿ 134 ರನ್​ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ 17.5 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅನುಭವಿ ಶಿಖರ್​ ಧವನ್ 37 ಎಸೆತಗಳಲ್ಲಿ 42 ರನ್​ ಕಲೆ ಹಾಕಿದರು. ಈ ಮೂಲಕ 2021 ಐಪಿಎಲ್​ನಲ್ಲಿ 400 (422) ರ ಗಡಿ ದಾಟಿದ ಮೊದಲ ಬ್ಯಾಟರ್‌ ಎನಿಸಿಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಟಾರ್ ಓಪನರ್​ ಇಂಡಿಯನ್​​ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಸತತ 6ನೇ ಬಾರಿ 400+ ರನ್​ ಬಾರಿಸಿದ 3ನೇ ಬ್ಯಾಟರ್‌ ಎನಿಸಿಕೊಂಡರು. ಧವನ್​ 2016ರಿಂದ ಕ್ರಮವಾಗಿ 501, 479, 497, 521, 618 ಮತ್ತು ಈ ವರ್ಷ ಈಗಾಗಲೇ 422 ರನ್​ಗಳಿಸಿ ಮುನ್ನುಗ್ಗುತ್ತಿದ್ದಾರೆ.

ಇವರನ್ನು ಹೊರತುಪಡಿಸಿದರೆ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸುರೇಶ್ ರೈನಾ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡದ ಡೇವಿಡ್ ವಾರ್ನರ್ ಸತತ 7 ಬಾರಿ 400ಕ್ಕೂ ಹೆಚ್ಚು ರನ್​ಗಳಿಸಿದ ದಾಖಲೆ ಹೊಂದಿದ್ದಾರೆ. ರೈನಾ 2008ರಿಂದ 2014ವರೆಗೆ ಮತ್ತು ವಾರ್ನರ್ 2013ರಿಂದ 2020ರವರೆಗೆ​ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: ನೋಡಿ: ಟಿ20 ವಿಶ್ವಕಪ್​ ಗೀತೆಯಲ್ಲಿ ಕೊಹ್ಲಿ ಪೊಲಾರ್ಡ್ ವಿಭಿನ್ನ ರೀತಿಯಲ್ಲಿ ಮಿಂಚಿಂಗ್

ABOUT THE AUTHOR

...view details