ಕರ್ನಾಟಕ

karnataka

ETV Bharat / sports

ಅಸಡ್ಡೆ ಬೇಡ, ಆದಷ್ಟು ಬೇಗ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಿ: ಶಿಖರ್ ಧವನ್ ಮನವಿ - ಭಾರತ ಕ್ರಿಕೆಟ್ ತಂಡ

ಕ್ರಿಕೆಟಿಗ ಶಿಖರ್​ ಧವನ್​ ಇಂದು ಕೋವಿಡ್​ ವ್ಯಾಕ್ಸಿನ್​ ಪಡೆದಿದ್ದಾರೆ. ಜೊತೆಗೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಜನತೆಗೆ ಕರೆ ನೀಡಿದ್ದಾರೆ.

ಶಿಖರ್ ಧವನ್
ಶಿಖರ್ ಧವನ್

By

Published : May 6, 2021, 5:18 PM IST

ನವದೆಹಲಿ: ಐಪಿಎಲ್ ಮುಂದೂಡಲ್ಪಟ್ಟಿದ್ದರಿಂದ ಮನೆಗೆ ಮರಳಿರುವ ಭಾರತ ತಂಡದ ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಗುರುವಾರ ಮೊದಲ ಡೋಸ್​ ಕೋವಿಡ್​ 19 ವ್ಯಾಕ್ಸಿನ್​ ಸ್ವೀಕರಿಸಿದ್ದಾರೆ.

35 ವರ್ಷದ ಬ್ಯಾಟ್ಸ್​ಮನ್ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ತಂಡ ಈ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ದುರಾದೃಷ್ಟವಶಾತ್ ಬಯೋಬಬಲ್ ಬ್ರೇಕ್​ನಿಂದ ಟೂರ್ನಿ ತಾತ್ಕಾಲಿಕವಾಗಿ ರದ್ದಾಗಿದೆ.

"ಲಸಿಕೆ ಸ್ವೀಕರಿಸಿಲಾಗಿದೆ. ಈ ಕಠಿಣ ಸಂದರ್ಭದಲ್ಲಿ ಫ್ರಂಟ್​ಲೈನ್​ ವಾರಿಯರ್​ಗಳ ತ್ಯಾಗ ಮತ್ತು ಸಮರ್ಪಣೆಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವ ವಿಚಾರದಲ್ಲಿ ಅಸಡ್ಡೆ ಬೇಡ. ದಯವಿಟ್ಟು ಆದಷ್ಟು ಬೇಗ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಿ, ಇದು ವೈರಸ್​ ಅನ್ನು ಮಣಿಸಲು ನಮಗೆಲ್ಲಾ ನೆರವಾಗಲಿದೆ" ಎಂದು ಧವನ್ ಟ್ವೀಟ್ ಮಾಡಿದ್ದಾರೆ.

ಟೀಮ್ ಇಂಡಿಯಾದಲ್ಲಿ ಕೋಚ್ ರವಿಶಾಸ್ತ್ರಿ ವ್ಯಾಕ್ಸಿನ್ ಪಡೆದ ಮೊದಲು ವ್ಯಕ್ತಿಯಾಗಿದ್ದರು. ಅವರು ಮಾರ್ಚ್​ನಲ್ಲಿ ಮೊದಲ ಹಂತದಲ್ಲಿ ಹಿರಿಯ ನಾಗರೀಕರಿಗೆ ವ್ಯಾಕ್ಸಿನ್​ಗೆ ಅನುಮತಿ ನೀಡಿದಾಗಲೇ ಲಸಿಕೆ ಹಾಕಿಸಿಕೊಂಡಿದ್ದರು.

ಇದನ್ನು ಓದಿ:ಐಪಿಎಲ್​ ಬಯೋ ಬಬಲ್​ಗೆ ಕೋವಿಡ್​ ಲಗ್ಗೆ ಹಾಕಿದ್ದು ಹೇಗೆ?... ಗಂಗೂಲಿ ತಿಳಿಸಿದ್ರು ಈ ಮಾಹಿತಿ

ABOUT THE AUTHOR

...view details