ಹೈದರಾಬಾದ್:ಭಾರತದ ಕ್ರಿಕೆಟ್ ತಂಡದಲ್ಲಿ ಆರಂಭಿಕರ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇದೆ. ಮೂರು ವಿಭಾಗದಲ್ಲಿ ನಾಯಕರಾಗಿರುವ ರೋಹಿತ್ ಶರ್ಮಾ ಒಂದೆಡೆ ಫಿಕ್ಸ್ ಆಗಿದ್ದಾರೆ. ಇನ್ನೊಂದು ಸ್ಥಾನಕ್ಕೆ ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿ ಜೋರಾಗಿಯೇ ಇದೆ. ಈ ನಡುವೆ ಶಿಖರ್ ಧವನ್ಗೆ ತಂಡದಲ್ಲಿ ಸ್ಥಾನವೂ ಸಿಗುತ್ತಿಲ್ಲ.
2022ರಲ್ಲಿ ಡಿಸೆಂಬರ್ನಲ್ಲಿ ಭಾರತ ಬಾಂಗ್ಲಾದೇಶದ ಪ್ರವಾಸ ಮಾಡಿತ್ತು, ಈ ಟೂರ್ನ ಏಕದಿನ ತಂಡ ಆರಂಭಿಕ ಸ್ಥಾನ ವಹಿಸಿದ್ದರು. ನಂತರದ ಭಾರತ ತವರಿನಲ್ಲಿ ಆಡಿದ ಪಂದ್ಯಗಳಲ್ಲಿ ಕಿಶನ್ ಮತ್ತು ಗಿಲ್ ಉತ್ತಮ ಆಟ ಪ್ರದರ್ಶಿಸಿದ್ದರಿಂದ ಶಿಖರ್ಗೆ ತಂಡದಲ್ಲಿ ಸ್ಥಾನ ಸಿಗದಂತಾಗಿದೆ. ಈ ನಡುವೆ ರೀಲ್ಸ್ಗಳನ್ನು ಹೆಚ್ಚಾಗಿ ಮಾಡುತ್ತಿರುವ ಶಿಖರ್ ಕ್ರಿಕೆಟ್ನಲ್ಲಿ ಅವಕಾಶಕ್ಕೆ ಕಾಯುವ ಬದಲು ನಟನ ಕ್ಷೇತ್ರದಲ್ಲಿ ಅವಕಾಶ ಹುಡುಕುತ್ತಿರುವಂತೆ ಕಾಣುತ್ತಿದೆ.
ಹೌದು, ಕ್ರಿಕೆಟ್ನಲ್ಲಿ ಗಬ್ಬರ್ ಸಿಂಗ್ ಎಂದೇ ಕೆರಸಿಕೊಳ್ಳುತ್ತಿದ್ದ ಶಿಖರ್ ಧವನ್ ಪೋಲಿಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪೋಲಿಸ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಧವನ್ ಅವರ ಈ ಅವತಾರದ ವಿಷಯ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ರೀಲ್ಸ್ ಮಾಡುವುದರಲ್ಲಿ ಹೆಚ್ಚು ಫೇಮ್ ಆಗಿರುವ ಶಿಖರ್ ಧವನ್ ನಟನೆಯಲ್ಲೇ ಮುಂದುವರೆಯುವ ಸಾಧ್ಯತೆಯೂ ಇದೆ.
ಶಿಖರ್ ತಮ್ಮ ಹೊಸ ಲುಕ್ನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಪೊಲೀಸ್ ಸಿಬ್ಬಂದಿಯ ಪಾತ್ರದಲ್ಲಿ ಕಾಣಬಹುದು. "ಆಲಿ ರೇ ಆಲಿ! ಆತಾ ತುಜಿ ಬರಿ ಆಲಿ! ಸದ್ಯದಲ್ಲೇ ವಿಷಯ ಹೊರ ಬರಲಿದೆ" ಎಂದು ಬರೆದುಕೊಂಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ ಧವನ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಸ್ಟೇಷನ್ ಒಳಗೆ ರೌಡಿಗಳನ್ನು ಎಳೆದುಕೊಂಡು ಬಂದು ಹೊಡೆಯುತ್ತಾರೆ. ನಂತರ ಎಲ್ಲಾ ವಿಲನ್ಗಳು ಶಿಖರ್ ಕಾಲಿನ ಬಳಿ ಕುಳಿತುಕೊಳ್ಳುತ್ತಾರೆ. ರೀಲ್ನಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಯಾವುದರ ಹಿಂಟ್ ಎಂದು ಇನ್ನೂ ತಿಳಿಸಿಲ್ಲ.
ಧವನ್ ಅಭಿನಯಕ್ಕೆ ರೀಲ್ನಲ್ಲಿ ಉತ್ತಮ ಪ್ರತಿಕ್ರಯೆಗಳು ಬರುತ್ತಿವೆ. ವೆಬ್ ಸರಣಿಗಾಗಿ ಅವರು ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ಕಮೆಂಟ್ಗಳು ಹರಿದಾಟುತ್ತಿವೆ. ಯಾವುದಕ್ಕೂ ಕಾದು ನೋಡಿ ಎಂದು ಶಿಖರ್ ಬರೆದುಕೊಂಡಿರುವುದರಿಂದ ಅದನ್ನೇ ಮಾಡಬೇಕಿದೆ. ಕ್ರಿಕೆಟ್ನಿಂದ ಅವಕಾಶ ಸಿಗದಿದ್ದಕ್ಕಾಗಿ ದೂರ ಉಳಿಯುತ್ತಾರ ಅದೂ ತಿಳಿದಿಲ್ಲ ಒಟ್ಟಿನಲ್ಲಿ ಅವಕಾಶಕ್ಕಂತೂ ಎದುರು ನೋಡುತ್ತಿರುವುದು ಖಂಡಿತ.
ಕಳೆದ ವರ್ಷ ಡಿಸೆಂಬರ್ನಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ಗೆ ವಿಶ್ರಾಂತಿ ನೀಡಿದ್ದ ವೇಳೆ ಶಿಖರ್ ಧವನ್ ನ್ಯೂಜಿಲೆಂಡ್ ಸೀರೀಸ್ನಲ್ಲಿ ಭಾರತ ತಂಡದ ನಾಯಕರಾಗಿದ್ದರು. ನಂತರ ಬಾಂಗ್ಲಾ ಸರಣಿಯಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿದ್ದರು ಅದರ ನಂತರ ತಂಡದಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಹಿಂದೆ ಪತ್ರಿಕೆಯೊಂದಕ್ಕೆ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಆಡುವ ಆಸೆಯನ್ನು ಶಿಖರ್ ಧವನ್ ಹೇಳಿಕೊಂಡಿದ್ದರು.
ಇದನ್ನೂ ಓದಿ:ಏಷ್ಯಾಕಪ್ 2023: ಪಾಕ್ಗೆ ತಂಡ ಕಳಿಸುವಂತೆ ಮೋದಿಗೆ ಮನವಿ ಮಾಡಿದ ಅಫ್ರಿದಿ