ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕ್ರಿಕೆಟರ್ ಅಂದರೆ ಅದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್. ಹಲವಾರು ಡ್ಯಾನ್ಸ್, ಡೈಲಾಗ್ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಈಗ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿರುವ ರವೀಂದ್ರ ಜಡೇಜಾ ಮುಂದೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದು, ಧವನ್ರ ತಮಾಷೆಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ.
ಮದುವೆ ಮಾಡ್ಕೋ ಜವಾಬ್ದಾರಿ ಬರುತ್ತೆ:ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರವೀಂದ್ರ ಜಡೇಜಾ ಸ್ಟ್ರೆಚರ್ ಮೇಲೆ ಕುಳಿತಿದ್ದರೆ, ಶಿಖರ್ ಧವನ್ ಅವರ ಪಕ್ಕ ಸಿನಿಮಾ ಹಾಡಿಗೆ ನೃತ್ಯ ಮಾಡಿ ಜಡೇಜಾರನ್ನು ರಂಜಿಸುತ್ತಿದ್ದಾರೆ. ತಮಾಷೆ ಮಾಡುತ್ತಿರುವ ಧವನ್ ಕಂಡು ಜಡೇಜಾ, "ಮದುವೆಯಾಗು ಜವಾಬ್ದಾರಿ ಬರುತ್ತೆ. ಆಗಲಾದರೂ ಸುಧಾರಿಸುತ್ತೀಯಾ" ಎಂದು ಹೇಳುತ್ತಾರೆ.
ಇದನ್ನು ಕೇಳಿದ ಧವನ್ ಮತ್ತೂ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಶಿಖರ್ ಧವನ್ ಸಾಮಾಜಿಕ ಜಾಲತಾಣ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಧವನ್ರ ಈ ತಮಾಷೆಯನ್ನು ಅಭಿಮಾನಿಗಳು ಮೆಚ್ಚಿದರೆ, ಇನ್ನು ಕೆಲವರು ಕಾಲೆಳೆದಿದ್ದಾರೆ.