ಕರ್ನಾಟಕ

karnataka

ETV Bharat / sports

ಕೊಹ್ಲಿ ನಂತರ ಐಪಿಎಲ್​ನಲ್ಲಿ ​6000 ರನ್​ಗಳ ಗಡಿ ದಾಟಿದ 2ನೇ ಬ್ಯಾಟರ್​ ಶಿಖರ್​ ಧವನ್ - ಇಂಡಿಯನ್ ಪ್ರೀಮಿಯರ್ ಲೀಗ್

ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2 ರನ್​ಗಳಿಸುತ್ತಿದ್ದಂತೆ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ 6 ಸಾವಿರ ಗಡಿ ದಾಟಿದರು. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ 8 ಕೋಟಿ ರೂ, ನೀಡಿ ಖರೀದಿಸಿತ್ತು.

Shikhar Dhawan becomes second batter after Virat Kohli to hit 6000 IPL runs
ಶಿಖರ್ ಧವನ್ 6000 ಐಪಿಎಲ್ ರನ್​

By

Published : Apr 25, 2022, 8:40 PM IST

ಮುಂಬೈ: 200 ನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ ವಿರಾಟ್​ ಕೊಹ್ಲಿ ನಂತರ 6000 ರನ್ ಪೂರೈಸಿದ 2ನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2 ರನ್​ಗಳಿಸುತ್ತಿದ್ದಂತೆ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ 6 ಸಾವಿರ ಗಡಿ ದಾಟಿದರು. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ 8 ಕೋಟಿ ರೂ, ನೀಡಿ ಖರೀದಿಸಿತ್ತು.

ವಿರಾಟ್ ಕೊಹ್ಲಿ ತಮ್ಮ 196ನೇ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ಸ್ಥಾಪಿಸಿದ್ದರು. ಧವನ್​ ತಮ್ಮ 200ನೇ ಪಂದ್ಯದಲ್ಲಿ ಈ ಸಾಧನೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ಎಡಗೈ ಬ್ಯಾಟರ್​ 199 ಇನ್ನಿಂಗ್ಸ್​ಗಳಲ್ಲಿ 2 ಶತಕ ಮತ್ತು 45 ಅರ್ಧಶತಕಗಳ ಸಹಿತ 6000+ ರನ್​ಗಳಿಸಿದ್ದಾರೆ. ವಿರಾಟ್ ಕೊಹ್ಲಿ 207 ಇನ್ನಿಂಗ್ಸ್​ಗಳಿಂದ 6,402 ರನ್​ಗಳಿಸಿ ಐಪಿಎಲ್​ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ 9000 ರನ್:ಇನ್ನು ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಓಪನರ್​ 9000 ರನ್​ಪೂರ್ಣಗೊಳಿಸಿದ್ದಾರೆ. ಈ ಮೂಲಕ ಟಿ-20 ಕ್ರಿಕೆಟ್​​ನಲ್ಲಿ ಗರಿಷ್ಠ ರನ್​ಗಳಿಸಿದ 3ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 10,392, ರೋಹಿತ್ ಶರ್ಮಾ 10,048 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ತಮಗಿಂತ 28 ವರ್ಷದ ಕಿರಿಯಳೊಂದಿಗೆ 2ನೇ ವಿವಾಹವಾಗಲಿದ್ದಾರೆ 66 ವರ್ಷದ ಮಾಜಿ ಕ್ರಿಕೆಟಿಗ ಅರುಣ್​ ಲಾಲ್

ABOUT THE AUTHOR

...view details