ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಶಿಖರ್ ಧವನ್​​ ಕ್ಯಾಪ್ಟನ್‌: ಬಿಸಿಸಿಐ - ಈಟಿವಿ ಭಾರತ ಕರ್ನಾಟಕ

ಸೆಪ್ಟೆಂಬರ್​​ 28 ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Shikar Dhawan
Shikar Dhawan

By

Published : Sep 12, 2022, 9:17 AM IST

ಮುಂಬೈ:ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಮುಂದಿನ ಕೆಲ ದಿನಗಳಲ್ಲಿ ಟೀಂ ಇಂಡಿಯಾ ಘೋಷಣೆಯಾಗಲಿದೆ. 50 ಓವರ್​​​​​ಗಳ ಕ್ರಿಕೆಟ್ ಟೂರ್ನಿಗೆ ನಾಯಕತ್ವದ ಜವಾಬ್ದಾರಿ ಶಿಖರ್ ಧವನ್​​​ ಹೆಗಲಿಗೆ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳಿಂದು ತಿಳಿದುಬಂದಿದೆ.

ರೋಹಿತ್​ ಶರ್ಮಾ ಸೇರಿದಂತೆ ಕೆಲ ಪ್ಲೇಯರ್ಸ್​​ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದೆ. ಅಕ್ಟೋಬರ್​​ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಮೆಂಟ್​ ಆರಂಭಗೊಳ್ಳಲಿದೆ. ಹೀಗಾಗಿ, ಕೆಲ ಪ್ರಮುಖ ಪ್ಲೇಯರ್ಸ್​​ಗೆ ಬಿಡುವು ನೀಡಲು ಆಯ್ಕೆ ಸಮಿತಿ ಹಾಗೂ ಬಿಸಿಸಿಐ ನಿರ್ಧರಿಸಿದೆ.

ತಂಡದ ಮುಖ್ಯ ಕೋಚ್ ರಾಹುಲ್​ ದ್ರಾವಿಡ್​​ ಅವರಿಗೂ ಬ್ರೇಕ್‌ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೋಸ್ಕರ ವಿವಿಎಸ್​​ ಲಕ್ಷಣ್​ ಕೋಚ್​ ಆಗಿ ಸೇವೆ ಸಲ್ಲಿಸಲಿರುವರು. ಹರಿಣಗಳ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಸೆಪ್ಟೆಂಬರ್​​ 28 ರಿಂದ ಸರಣಿ ಪ್ರಾರಂಭಗೊಳ್ಳಲಿದೆ.

ಇದನ್ನೂ ಓದಿ:ಏಕದಿನ ಕ್ರಿಕೆಟ್​ನಲ್ಲಿ ಗಬ್ಬರ್ ಸಿಂಗ್ ದಾಖಲೆ​: ಈ ಸಾಧನೆ ಮಾಡಿದ 10ನೇ ಭಾರತೀಯ

ಟಿ20 ಪಂದ್ಯಗಳು ಕ್ರಮವಾಗಿ ತಿರುವನಂತಪುರಂ, ಗುವಾಹಟಿ ಹಾಗೂ ಇಂದೋರ್​​ನಲ್ಲಿ ನಡೆಯಲಿವೆ. ಅಕ್ಟೋಬರ್​​​ 6ರಿಂದ ಏಕದಿನ ಪಂದ್ಯಗಳ ಸರಣಿ ಶುರುವಾಗಲಿದ್ದು, ರಾಂಚಿ ಹಾಗೂ ದೆಹಲಿಯಲ್ಲಿ ಆಯೋಜನೆಗೊಂಡಿವೆ. ಕಳೆದ ಕೆಲ ವಾರಗಳ ಹಿಂದೆ ಜಿಂಬಾಬ್ವೆ ವಿರುದ್ಧ ನಡೆದ ಸರಣಿಯಲ್ಲೂ ತಂಡವನ್ನು ಎಡಗೈ ಬ್ಯಾಟರ್ ಶಿಖರ್ ಧವನ್​ ಮುನ್ನಡೆಸಿದ್ದರು. ಭಾರತ ಈ ಸರಣಿಯನ್ನು 3-0 ಅಂತರದಿಂದ ಕೈವಶ ಮಾಡಿಕೊಂಡಿತ್ತು.

ABOUT THE AUTHOR

...view details