ಕೊಲಂಬೊ:ಲಂಕಾ ವಿರುದ್ಧ ಇಂದು ಎರಡನೇ ಟಿ-20 ನಡೆಯಲಿದೆ. ಕೊರೊನಾ ವೈರಸ್ ಹಾವಳಿ ಮಧ್ಯೆ ಪಂದ್ಯ ನಡೆಯುತ್ತಿರುವ ಕಾರಣ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಇಂದಿನ ಪಂದ್ಯಕ್ಕೆ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೇಶ್ ರಾಣಾ ಹಾಗು ಚೇತನ್ ಸಕಾರಿಯಾ ಪದಾರ್ಪಣೆ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿಖರ್ ಧವನ್ ಫಿಟ್ ಆಗಿದ್ದು, ತಂಡ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಆಲ್ರೌಂಡರ್ ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಎರಡು ಪಂದ್ಯಗಳಿಂದ ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ದೀಪಕ್ ಚಹರ್, ಕೆ.ಗೌತಮ್, ಇಶಾನ್ ಕಿಶನ್, ಯಜುವೇಂದ್ರ ಚಹಲ್ ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.