ದುಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಹಿಳಾ ಟಿ-20 ಕ್ರಿಕೆಟ್ನ ನೂತನ ಶ್ರೇಯಾಂಕ ಬಿಡುಗಡೆ ಮಾಡಿದೆ. ಭಾರತದ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ನಂಬರ್ 1 ಸ್ಥಾನಕ್ಕೆ ಮರಳಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ ಮತ್ತೊಂದು ಸ್ಥಾನಕ್ಕೆ ಬಡ್ತಿ ಹೊಂದಿದ್ದು, ಸದ್ಯ 4ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಪ್ರಿನ್ಸಿಪಾಲನಾ ಇಲ್ಲ ಪೋಲಿನಾ.. ಸಮವಸ್ತ್ರ ಹಾಕದ ವಿದ್ಯಾರ್ಥಿನಿಯರಿಗೆ ಬಟ್ಟೆಬಿಚ್ಚಿ ಎಂದ ಪ್ರಾಂಶುಪಾಲ..
ಬ್ಯಾಟಿಂಗ್ ವಿಭಾಗದಲ್ಲಿ ಶೆಫಾಲಿ ವರ್ಮಾ 759 ಅಂಕ, ಆಸ್ಟ್ರೇಲಿಯಾದ ಬೆತ್ ಮೂನಿ 744 ಹಾಗೂ ಟಿ20 ಕ್ರಿಕೆಟ್ನ ಉಪನಾಯಕಿ ಸ್ಮೃತಿ ಮಂಧಾನ 716 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ 709 ಅಂಕ ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಲಿಜೆಲ್ ಲಿ ಮೂರು ಸ್ಥಾನ ಜಿಗಿತ ಕಂಡು ಎಂಟನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಕೌಟ್ ಅವರು 2ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಶೋಪಿ ಡಿವೈನ್ ಆಲ್ರೌಂಡರ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದಾರೆ.
ಇಂಗ್ಲೆಂಡ್-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಮೂರನೇ ಟಿ-20 ಪಂದ್ಯ ಮುಕ್ತಾಯವಾಗ್ತಿದ್ದಂತೆ ಐಸಿಸಿ, ಮಹಿಳಾ ವಿಭಾಗದ ಶ್ರೇಯಾಂಕ ಪಟ್ಟಿ ರಿಲೀಸ್ ಮಾಡಿದೆ.