ಕರ್ನಾಟಕ

karnataka

ETV Bharat / sports

ನಾನು ಮಾತ್ರವಲ್ಲ, ಶಾರ್ದೂಲ್ ಠಾಕೂರ್​ ಕೂಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ: ರೋಹಿತ್​ ಶರ್ಮಾ - ಭಾರತ-ಇಂಗ್ಲೆಂಡ್​

ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು ಭಾರಿ ಮೆಚ್ಚುಗೆ ಗಳಿಸಿದೆ. ಲಂಡನ್ನಿನ ಓವಲ್​ ಮೈದಾನದಲ್ಲಿ ನಡೆದ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿ ಮಿಂಚಿರುವ ರೋಹಿತ್​ ಶರ್ಮಾ 'ಪಂದ್ಯಶ್ರೇಷ್ಠ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಅಮೋಘ ಗೆಲುವಿನ ಬಳಿಕ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.

Rohit Sharma
Rohit Sharma

By

Published : Sep 7, 2021, 3:17 PM IST

ಓವಲ್​​(ಲಂಡನ್​): ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ 4ನೇ ಟೆಸ್ಟ್​​ ಪಂದ್ಯದಲ್ಲಿ ಕೊಹ್ಲಿ ಪಡೆ 157 ರನ್​​ಗಳ ಅಧಿಕಾರಯುತ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

ಓವಲ್​ನಲ್ಲಿ ಟೀಂ ಇಂಡಿಯಾ ಗೆಲುವಿನ ಸಂಭ್ರಮ

ರೋಮಾಂಚಕ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಲಯ ಕಂಡುಕೊಂಡ ಹಿಟ್‌ಮ್ಯಾನ್‌ ಜನಪ್ರಿಯತೆಯ ರೋಹಿತ್​ ಶರ್ಮಾ (127 ರನ್​) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಕುರಿತು ಮಾತನಾಡಿರುವ ರೋಹಿತ್​ ಶರ್ಮಾ, 'ನಾನು ಮಾತ್ರವಲ್ಲ, ಶಾರ್ದೂಲ್ ಠಾಕೂರ್​ ಕೂಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ ಆಟಗಾರ' ಎಂದು ಸಹ ಆಟಗಾರನನ್ನು ಕೊಂಡಾಡಿದರು. ಓವಲ್​ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ ಜೊತೆಗೆ​ ಬ್ಯಾಟಿಂಗ್‌ನಲ್ಲೂ​ ಮಿಂಚಿದ್ದಾರೆ. ಅವರಿಗೂ ಈ ಗೌರವ ಸಲ್ಲಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾರ್ದೂಲ್ ಠಾಕೂರ್

ವರ್ಚುವಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, 'ವಿದೇಶ ಪ್ರವಾಸ ಕೈಗೊಂಡು ಈ ರೀತಿಯ ಗೆಲುವು ಸಿಕ್ಕಾಗ ನಿಜಕ್ಕೂ ಖುಷಿಯಾಗುತ್ತದೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಆಟ ನಮ್ಮ ತಂಡದಿಂದ ಮುಂದುವರೆಯಲಿದೆ' ಎಂದು ಹೇಳುತ್ತಾ ಆಂಗ್ಲಪಡೆಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. 'ಇಂತಹ ಮೈದಾನಗಳಲ್ಲಿ ರನ್​ಗಳಿಕೆ ತುಂಬಾ ಕಷ್ಟ. ಆದರೆ ಶಾರ್ದೂಲ್ ಠಾಕೂರ್​ ಸುಲಭವಾಗಿ ಬ್ಯಾಟ್​ ಬೀಸಿದ್ದರಿಂದ ತಂಡ ಹೆಚ್ಚು ರನ್​​ಗಳಿಕೆ ಮಾಡಲು ಸಾಧ್ಯವಾಯಿತು' ಎಂದರು.

ಓವಲ್​ ಮೈದಾನದಲ್ಲಿ ಟೀಂ ಇಂಡಿಯಾ 50 ವರ್ಷಗಳ ಬಳಿಕ ದಾಖಲೆಯ ಗೆಲುವು ಪಡೆದಿದೆ. ಮುಂದಿನ ಪಂದ್ಯ ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿದೆ.

ABOUT THE AUTHOR

...view details