ಕರ್ನಾಟಕ

karnataka

ETV Bharat / sports

"ಸ್ವರ್ಗವನ್ನು ಇನ್ನಷ್ಟು ಆಕರ್ಷಕ ಮಾಡಿರುತ್ತೀರಿ" ಎಂದು ವಾರ್ನ್​ ನೆನಪಿಸಿಕೊಂಡ ಲಿಟಲ್​ ಮಾಸ್ಟರ್​ - ETV Bharath Karnataka

2022 ಮಾರ್ಚ್ 4 ರಂದು ಥಾಯ್ಲೆಂಡ್​ನಲ್ಲಿ ಹಠಾತ್ ಹೃದಯಾಘಾತ ದಿಂದ ಶೇನ್ ವಾರ್ನ್ ನಿಧನ - ಇನ್​ಸ್ಟಾದಲ್ಲಿ ವಾರ್ನ್​ ಕುರಿತು ವಿಶೇಷ ಪೋಸ್ಟ್​ ಮಾಡಿದ ಕ್ರಿಕೆಟ್​ ಆಸ್ಟ್ರೇಲಿಯಾ - ಸ್ವರ್ಗವನ್ನು ಇನ್ನಷ್ಟೂ ಆಕರ್ಷಕ ಮಾಡಿರುತ್ತೀರಿ ಎಂದ ಸಚಿನ್​

Shane Warne
ಶೇನ್ ವಾರ್ನ್ ಪುಣ್ಯ ಸ್ಮರಣೆ

By

Published : Mar 4, 2023, 7:39 PM IST

ನವದೆಹಲಿ:ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ (52) ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ಅಂದು ಕ್ರೀಡಾ ಜಗತ್ತು ಆಘಾತ ಮತ್ತು ದುಃಖದಿಂದ ಮುಳುಗಿತ್ತು. ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದು ತಮ್ಮದೇ ಆದ ದಾಖಲೆಗಳನ್ನು ಸ್ಥಾಪಿಸಿದ ದಂತಕಥೆ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಶೇನ್ ವಾರ್ನ್. ತಮ್ಮ ಬೌಲಿಂಗ್​ ಕೈಚಳಕದಿಂದ ಕ್ರಿಕೆಟ್​ ಜಗತ್ತನ್ನು ಮೂಕ ವಿಸ್ಮಿತರನ್ನಾಗಿಸಿದ್ದರು.

ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಕಳೆದ ವರ್ಷ ಮಾರ್ಚ್ 4 ರಂದು ಥಾಯ್ಲೆಂಡ್​​​ನಲ್ಲಿ ಹಠಾತ್ ಹೃದಯಾಘಾತದ ನಂತರ 52 ನೇ ವಯಸ್ಸಿನಲ್ಲಿ ನಿಧನರಾದರು. ವಾರ್ನ್ ಅವರ ಅಕಾಲಿಕ ಮರಣವು ಇಡೀ ಕ್ರಿಕೆಟ್ ವಲಯವನ್ನು ಆಘಾತಕ್ಕೀಡು ಮಾಡಿತ್ತು. ಮಾರ್ಚ್ 4 ರಂದು ಅವರ ಮೊದಲ ಮರಣ ವಾರ್ಷಿಕೋತ್ಸವವನ್ನು ಗುರುತಿಸಲು ಅವರ ಕುಟುಂಬ ಮತ್ತು ಹಲವಾರು ಕ್ರಿಕೆಟಿಗರು ಆಸ್ಟ್ರೇಲಿಯನ್ ಶ್ರೇಷ್ಠರ ಹೃತ್ಪೂರ್ವಕ ಸಂದೇಶಗಳು, ಫೋಟೋಗಳು ಮತ್ತು ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ, ತನ್ನ ಗೌರವಾರ್ಥವಾಗಿ, ವಾರ್ನ್ ಅವರ ಅಸಂಖ್ಯಾತ ಅದ್ಭುತ ವಿಕೆಟ್ ಟೇಕಿಂಗ್ ಎಸೆತಗಳ ಕ್ಲಿಪ್ ಅನ್ನು ಹಂಚಿಕೊಂಡಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, "ಬೌಲ್ಡ್, ವಾರ್ನ್," ಶೀರ್ಷಿಕೆ ನೀಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 341 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ ಕೆಲವೇ ಸಮಯದಲ್ಲಿ ವಿಡಿಯೋ ವೈರಲ್ ಆಗಿದೆ. ಆಟದ ಅಭಿಮಾನಿಗಳು ಮತ್ತು ಅನುಯಾಯಿಗಳು ಶೇನ್ ವಾರ್ನ್‌ಗೆ ಪ್ರೀತಿ ಮತ್ತು ಮೆಚ್ಚುಗೆಯ ಸಂದೇಶಗಳೊಂದಿಗೆ ಕಾಮೆಂಟ್‌ ಮಾಡಿದ್ದಾರೆ.

ಹೃದಯಾಘಾತದಿಂದ ಒಂದು ವರ್ಷದ ಹಿಂದೆ ನಿಧನರಾದ ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ ಅವರನ್ನು ಸಚಿನ್ ತೆಂಡೂಲ್ಕರ್ ಶನಿವಾರ ನೆನಪಿಸಿಕೊಂಡಿದ್ದಾರೆ. ತೆಂಡೂಲ್ಕರ್ ತನ್ನ ಸ್ನೇಹಿತ ವಿಶೇಷ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ​ "ನಾವು ಮೈದಾನದಲ್ಲಿ ಕೆಲವು ಸ್ಮರಣೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದೇವೆ. ಅವುಗಳಲ್ಲಿ ಹಲವಾರು ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಒಬ್ಬ ಶ್ರೇಷ್ಠ ಕ್ರಿಕೆಟಿಗನಾಗಿ ಮಾತ್ರವಲ್ಲದೇ ಉತ್ತಮ ಸ್ನೇಹಿತನಾಗಿಯೂ ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ. ನಿಮ್ಮ ಹಾಸ್ಯಪ್ರಜ್ಞೆ ಮತ್ತು ವರ್ಚಸ್ಸಿನಿಂದ ಸ್ವರ್ಗವನ್ನು ಹಿಂದೆಂದಿಗಿಂತಲೂ ಹೆಚ್ಚು ಆಕರ್ಷಕವಾದ ಸ್ಥಳವಾಗಿ ಮಾಡುತ್ತಿದ್ದೀರಿ ಎಂದು ನನಗೆ ನಂಬಿಕೆ ಇದೆ" ಎಂದಿದ್ದಾರೆ.

ಶೇನ್ ವಾರ್ನ್ ವೃತ್ತಿ ಜೀವನ:ವಾರ್ನ್ ತನ್ನ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 145 ಟೆಸ್ಟ್​ ಪಂದ್ಯಗಳಲ್ಲಿ 273 ಇನ್ನಿಂಗ್ಸ್​ನಲ್ಲಿ 17,995 ರನ್​ ಬಿಟ್ಟುಕೊಟ್ಟು 2.65 ಎಕಾನಮಿಯಲ್ಲಿ 708 ವಿಕೆಟ್​ ಪಡೆದಿದ್ದಾರೆ. 37 ಬಾರಿ 5 ವಿಕೆಟ್​ ಕಬಳಿಸಿದ್ದಾರೆ. 194 ಏಕದಿನ ಪಂದ್ಯಗಳನ್ನಾಡಿರುವ 191 ಇನ್ನಿಂಗ್ಸ್​ನಿಂದ 293 ವಿಕೆಟ್​ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ವಾರ್ನ್​ ಆಡಿಲ್ಲ. ಆದರೆ, ಭಾರತದಲ್ಲಿ ಪ್ರಖ್ಯಾತ ಲೀಗ್​ ಪಂದ್ಯವಾದ ಐಪಿಎಲ್​ ಆಡಿದ್ದು, 55 ಪಂದ್ಯಗಳಲ್ಲಿ 57 ವಿಕೆಟ್​ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 1001 ವಿಕೆಟ್​ ಕಬಳಿಸಿ ಅತೀ ಹೆಚ್ಚು ವಿಕೆಟ್​ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರದ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಐಸಿಸಿ ವಿಶ್ವಕಪ್ ಲೀಗ್ ಪಾಯಿಂಟ್ಸ್​ನಲ್ಲಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್: ಇನ್ನೂ ಅರ್ಹತೆ ಪಡೆಯದ ತಂಡಗಳ ವಿವರ ಇಲ್ಲಿದೆ..

ABOUT THE AUTHOR

...view details