ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಸ್ಪಿನ್ನರ್ ಶೇನ್​ ವಾರ್ನ್ ಅವ​ರದ್ದು ಸಹಜ ಸಾವು: ಥಾಯ್ಲೆಂಡ್‌ ಪೊಲೀಸ್ - ಶೇನ್ ವಾರ್ನ್ ಸಹಜ ಸಾವು

ಶೇನ್ ವಾರ್ನ್​ ಅವರ ಶವಪರೀಕ್ಷೆಯ ಫಲಿತಾಂಶ ತನಿಖಾ ತಂಡದ ಕೈ ಸೇರಿದೆ. ಈ ವರದಿಯಲ್ಲಿ ಕ್ರಿಕೆಟಿಗನ ಸಾವು ಸಹಜ ಕಾರಣಗಳಿಂದ ಉಂಟಾಗಿದೆ ಎಂದು ದೃಢಪಟ್ಟಿರುವುದಾಗಿ ಥಾಯ್​ ಪೊಲೀಸರು ತಿಳಿಸಿದ್ದಾರೆ.

Shane Warne died due to natural cause
ಶೇನ್ ವಾರ್ನ್ ಸಹಜ ಸಾವು

By

Published : Mar 7, 2022, 3:10 PM IST

ಬ್ಯಾಂಕಾಕ್​: ಆಸ್ಟ್ರೇಲಿಯಾದ ಲೆಜೆಂಡರಿ ಕ್ರಿಕೆಟರ್​ ಶೇನ್​ ವಾರ್ನ್​ ಅವರ ಶವಪರೀಕ್ಷೆಯ ಫಲಿತಾಂಶ ಹೊರಬಂದಿದ್ದು, ಇದರಲ್ಲಿ ಅವರ ಸಾವು ಸಹಜ ಕಾರಣಗಳಿಂದಾಗಿದೆ ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ಘೋಷಿಸಿದ್ದಾರೆ.

ಕೆಲವು ದಿನಗಳ ಹಿಂದೆ ವಾರ್ನ್​ ತಮ್ಮ ಫಿಟ್​ನೆಸ್​ ಅತ್ಯುತ್ತಮವಾಗಿದ್ದ ಹಳೆಯ ಫೋಟೋವನ್ನು ಶೇರ್​ ಮಾಡಿಕೊಂಡು, ತಾವು ತೂಕ ಕಡಿಮೆ ಮಾಡಿಕೊಳ್ಳುವ ಕಾರಣ ಡಯೆಟ್​ ಶುರು ಮಾಡಿರುವುದಾಗಿ ತಿಳಿಸಿದ್ದರು.

ಥಾಯ್​ ಪೊಲೀಸರ ಪ್ರಕಾರ, ವಾರ್ನ್​ ವಾರದ ಹಿಂದಷ್ಟೇ ಹೃದಯ ಸಂಬಂಧಿ ವಿಚಾರವಾಗಿ ವೈದ್ಯರನ್ನು ಭೇಟಿ ಮಾಡಿ ಬಂದಿದ್ದರು ಎಂದು ತಿಳಿದುಬಂದಿದೆ. ಜೊತೆಗೆ, ವಾರ್ನ್​ ಕುಟುಂಬಸ್ಥರು ಕೂಡ ಆಸ್ಟ್ರೇಲಿಯಾ ಬಿಡುವ ಮುನ್ನ ವಾರ್ನ್ ಅವರು ಹೃದಯ ಸಂಬಂಧಿತ ಕೆಲವು ಸಮಸ್ಯೆಗಳು ಮತ್ತು ಅಸ್ತಮಾದಿಂದ ಬಳಲುತ್ತಿದ್ದರು ಎಂದು ಥಾಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.​

ವಾರ್ನ್ ತನ್ನ ಸ್ನೇಹಿತರೊಂದಿಗೆ ಥಾಯ್ಲೆಂಡ್ ಕೊಲ್ಲಿಯಲ್ಲಿರುವ ಜನಪ್ರಿಯ ದ್ವೀಪ ಕೊಹ್ ಸಮುಯಿಗೆ ರಜೆ ಕಳೆಯಲು ತೆರಳಿದ್ದರು. ಆದರೆ ಶುಕ್ರವಾರ ತಮ್ಮ ಕೋಣೆಯಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು.

ಇದನ್ನೂ ಓದಿ:ಸರ್ಕಾರಿ ಗೌರವಗಳೊಂದಿಗೆ ಸ್ಪಿನ್​ ದಿಗ್ಗಜ ಶೇನ್​ ವಾರ್ನ್​ ಅಂತ್ಯಸಂಸ್ಕಾರ

ABOUT THE AUTHOR

...view details