ಕರ್ನಾಟಕ

karnataka

ETV Bharat / sports

ಬೆಳಗ್ಗೆ ತನ್ನದೇ ದೇಶದ ಕ್ರಿಕೆಟಿಗ ರಾಡ್​ ಮಾರ್ಷ್​ಗೆ ಸಂತಾಪ ಸೂಚಿಸಿದ್ದ ಶೇನ್​ ವಾರ್ನ್​ ಸಂಜೆ ನಿಧನ! - ಶೇರ್ನ್​ ವಾರ್ನ್​ ಸಾವು

ಆಸ್ಟ್ರೇಲಿಯಾದ ಲೆಜೆಂಡರಿ ಮಾಜಿ ವಿಕೆಟ್ ಕೀಪರ್ ರಾಡ್ ಮಾರ್ಷ್ ಅವರು ಪರಿಹಾರ ನಿಧಿ ಸಂಗ್ರಹಿಸುತ್ತಿರುವ ವೇಳೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಈ ಕುರಿತು ಶೇನ್​ ವಾರ್ನ್ ಅವರು ಟ್ವೀಟ್‌ ಮಾಡಿ ಇಂದು ಬೆಳಗ್ಗೆ ಸಂತಾಪ ಸೂಚಿಸಿದ್ದರು.

condoled
ಪರಲೋಕ

By

Published : Mar 4, 2022, 8:11 PM IST

ಆಸ್ಟ್ರೇಲಿಯಾ ಕ್ರಿಕೆಟ್​ ದಿಗ್ಗಜ, ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್ ಅವರು ಇಂದು ಬೆಳಗ್ಗೆ ಆಸ್ಟ್ರೇಲಿಯಾದ ಕ್ರಿಕೆಟರ್​ ರಾಡ್ ಮಾರ್ಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಆದರೆ, ಸಂಜೆ ವೇಳೆಗೆ ಅವರೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಆಸ್ಟ್ರೇಲಿಯಾದ ಲೆಜೆಂಡರಿ ಮಾಜಿ ವಿಕೆಟ್ ಕೀಪರ್ ರಾಡ್ ಮಾರ್ಷ್ ಅವರು ಪರಿಹಾರ ನಿಧಿ ಸಂಗ್ರಹಿಸುತ್ತಿರುವ ವೇಳೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು.

ಈ ಬಗ್ಗೆ ಶೇನ್​ ವಾರ್ನೆ ಟ್ವೀಟ್​​ ಮಾಡಿ 'ಕ್ರಿಕೆಟ್​ ದಿಗ್ಗಜನನ್ನು ಕಳೆದುಕೊಂಡಿದ್ದೇವೆ. ಇದೊಂದು ನೋವಿನ ಸುದ್ದಿ. ಇಂದಿನ ಕ್ರೀಡಾಳುಗಳಿಗೆ ಅವರು ಸ್ಪೂರ್ತಿಯಾಗಿದ್ದರು ಎಂದು ಟ್ವೀಟ್​ನಲ್ಲಿ ಬರೆದು ಸಂತಾಪ ಸೂಚಿಸಿದ್ದರು. ಆದರೆ, ವಿಧಿಯಾಟದಲ್ಲಿ ಶೇನ್​ ವಾರ್ನೆ ಕೂಡ ಇಂದೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ABOUT THE AUTHOR

...view details