ಕರ್ನಾಟಕ

karnataka

ETV Bharat / sports

ಯುಎಇ ಟಿ20 ಲೀಗ್​: ಎಂಐ ಎಮಿರೇಟ್ಸ್​ಗೆ ಶೇನ್​ ಬಾಂಡ್​ ಪ್ರಧಾನ ಕೋಚ್​ - ವಿನಯ್ ಕುಮಾರ್

ಯುಎಇ ಲೀಗ್​ನ ಎಂಐ ಎಮಿರೇಟ್ಸ್​ ತಂಡದ ಪ್ರಧಾನ ಕೋಚ್​, ಫೀಲ್ಡಿಂಗ್​, ಬೌಲಿಂಗ್​, ಬ್ಯಾಟಿಂಗ್​ ಕೋಚ್​ ಆಯ್ಕೆ ಮಾಡಲಾಗಿದೆ.

shane-bond-appointed-as-head-coach
ಎಂಐ ಎಮಿರೇಟ್ಸ್​ಗೆ ಶೇನ್​ ಬಾಂಡ್​ ಪ್ರಧಾನ ಕೋಚ್​

By

Published : Sep 17, 2022, 4:49 PM IST

ದುಬೈ:ಇಂಡಿಯನ್ ಪ್ರೀಮಿಯರ್​ ಲೀಗ್​ನ ಮುಂಬೈ ಇಂಡಿಯನ್ಸ್​ ತಂಡದ ಬೌಲಿಂಗ್​ ಕೋಚ್​ ಆಗಿರುವ ನ್ಯೂಜಿಲ್ಯಾಂಡ್​​ನ ಶೇನ್​ ಬಾಂಡ್​ರನ್ನು ಯುಎಇ ಟಿ20 ಲೀಗ್​ನ ಎಂಐ ಎಮಿರೇಟ್ಸ್​ ತಂಡದ ಪ್ರಧಾನ ಕೋಚ್​ ಆಗಿ ನೇಮಕ ಮಾಡಲಾಗಿದೆ. ಜೊತೆಗೆ ಪಾರ್ಥಿವ್​ ಪಟೇಲ್​ರನ್ನು ಬ್ಯಾಟಿಂಗ್​, ವಿನಯ್​ ಕುಮಾರ್​ ಬೌಲಿಂಗ್​ ಮತ್ತು ಜೇಮ್ಸ್​ ಫ್ರಾಂಕ್ಲಿನ್​ರನ್ನು ಫೀಲ್ಡಿಂಗ್​ ಕೋಚ್​ ಆಗಿ ನೇಮಿಸಲಾಗಿದೆ.

ಇದಲ್ಲದೇ, ಯುಎಇ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ರಾಬಿನ್ ಸಿಂಗ್​ರನ್ನು ಮುಂಬೈ ಇಂಡಿಯನ್ಸ್​ ಎಮಿರೇಟ್ಸ್‌ ಕ್ರಿಕೆಟ್‌ನ ಜನರಲ್ ಮ್ಯಾನೇಜರ್ ಆಗಿಯೂ ಆಯ್ಕೆ ಮಾಡಲಾಗಿದೆ. ಶೇನ್ ಬಾಂಡ್ 2015 ರಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡಿದ್ದರು. ಬೌಲಿಂಗ್​ ಕೋಚ್​ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಈವರೆಗೂ ತಂಡ ಗೆದ್ದ 4 ಪ್ರಶಸ್ತಿಗಳ ಭಾಗವಾಗಿದ್ದರು.

ಎಂಐ ಎಮಿರೇಟ್ಸ್​ ತಂಡದ ಬೌಲಿಂಗ್​ ಕೋಚ್​ ಆಗಿ ನೇಮಕವಾದ ಪಾರ್ಥಿವ್ ಪಟೇಲ್ ಈ ಹಿಂದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸಿದ್ದರು. 2020 ರಿಂದ ಟ್ಯಾಲೆಂಟ್ ಸ್ಕೌಟಿಂಗ್ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ತಂಡದ ಇನ್ನೊಬ್ಬ ಮಾಜಿ ಆಟಗಾರ ವಿನಯ್ ಕುಮಾರ್ 2021 ರಿಂದ ಸ್ಕೌಟಿಂಗ್ ತಂಡದಲ್ಲಿದ್ದು, ಇದೀಗ ಯುಎಇ ತಂಡದ ಬೌಲಿಂಗ್​ ವಿಭಾಗಕ್ಕೆ ನಿರ್ದೇಶನ ನೀಡಲಿದ್ದಾರೆ.

ಪಾರ್ಥಿವ್ ಪಟೇಲ್​ ಮತ್ತು ವಿನಯ್ ಕುಮಾರ್​ ಅವರು ಮುಂಬೈ ಇಂಡಿಯನ್ಸ್​ ತಂಡ 2015 ಮತ್ತು 2017 ರಲ್ಲಿ ಐಪಿಎಲ್​ ಪ್ರಶಸ್ತಿ ಗೆದ್ದ ತಂಡದ ಸದಸ್ಯರಾಗಿದ್ದರು. ತಂಡದ ಮಾಜಿ ಆಲ್​ರೌಂಡರ್​ ಆಗಿದ್ದ ಜೇಮ್ಸ್ ಫ್ರಾಂಕ್ಲಿನ್ ಎಂಐ ಎಮಿರೇಟ್ಸ್​ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಮಾಡಲಿದ್ದಾರೆ.

ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಭಾರತದ ಐಪಿಎಲ್​ ಮಾತ್ರವಲ್ಲದೇ, ಯುಎಇ ಲೀಗ್​, ಕೆರೆಬಿಯನ್​ ಲೀಗ್​ನಲ್ಲಿಯೂ ತಂಡದ ಫ್ರಾಂಚೈಸಿ ಹೊಂದಿದೆ.

ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ಅಶ್ವಿನ್​​: ಇಂಜಿನಿಯರ್​ ಆಗಬೇಕಿದ್ದ ವ್ಯಕ್ತಿ ಕ್ರಿಕೆಟರ್​​ ಆಗಿದ್ದು ಹೇಗೆ?

ABOUT THE AUTHOR

...view details