ಕರ್ನಾಟಕ

karnataka

ETV Bharat / sports

ವಿರಾಟ್,​ ಗೇಲ್​ ದಾಖಲೆ ಮುರಿದ ಬಾಂಗ್ಲಾ ನಾಯಕ ಶಕೀಬ್​; 200ನೇ ವಿಕೆಟ್​ ಪಡೆದ ಕಿವೀಸ್‌ನ ಟ್ರೆಂಟ್ ಬೌಲ್ಟ್ - ETV Bharath Karnataka

ಬಾಂಗ್ಲಾದೇಶದ ಕ್ರಿಕೆಟ್‌ ತಂಡದ ನಾಯಕ ಶಕೀಬ್ ಅಲ್ ಹಸನ್, ನ್ಯೂಜಿಲೆಂಡ್‌​ ವಿರುದ್ಧದ ಪಂದ್ಯದಲ್ಲಿ 40 ರನ್​ ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 6ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

Shakib al Hasan - Trent Boult
Shakib al Hasan - Trent Boult

By ETV Bharat Karnataka Team

Published : Oct 13, 2023, 8:18 PM IST

ಚೆನ್ನೈ (ತಮಿಳುನಾಡು): ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಸನತ್ ಜಯಸೂರ್ಯ, ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರಂತಹ ಕ್ರಿಕೆಟ್ ದಂತಕಥೆಗಳನ್ನು ಹಿಂದಿಕ್ಕಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರೈಸಿದರು. ಈ ಸಾಧನೆ ಮಾಡಿದ ಆರನೇ ಕಿವೀಸ್ ಬೌಲರ್ ಮತ್ತು ಹೊಸ ಮೈಲಿಗಲ್ಲು ತಲುಪಿದ ವೇಗದ ಕಿವೀಸ್ ಬೌಲರ್ ಎನಿಸಿಕೊಂಡಿದ್ದಾರೆ.

ಚೆನ್ನೈನ ಚಿಂದಂಬರಂ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​ ಸೆಣಸಾಡುತ್ತಿದ್ದು, ಅನುಭವಿ ಬಾಂಗ್ಲಾ ಆಲ್‌ರೌಂಡರ್ ಈ ಸಾಧನೆ ಮಾಡಿದ್ದಾರೆ. 13ನೇ ಓವರ್​ಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಕೀಬ್​ ಆಸರೆಯಾದರು. ಮುಶ್ಫಿಕರ್ ರಹೀಮ್ ಜೊತೆಗೆ 96 ರನ್​ಗಳ ಪಾಲುದಾರಿಕೆ ಮಾಡಿದ ಅವರು 51 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿಂದ 40 ರನ್ ಗಳಿಸಿದರು.

32 ವಿಶ್ವಕಪ್​ ಪಂದ್ಯಗಳನ್ನಾಡಿದ ಶಕೀಬ್ ಎರಡು ಶತಕ ಮತ್ತು 10 ಅರ್ಧಶತಕಗಳೊಂದಿಗೆ 42.89 ಸರಾಸರಿಯಲ್ಲಿ 1,201 ರನ್ ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ 124 ಆಗಿದೆ. ಜಯಸೂರ್ಯ (1,165 ರನ್), ವಿರಾಟ್ ಕೊಹ್ಲಿ (1,170 ರನ್) ಮತ್ತು ಗೇಲ್ (1,186 ರನ್) ಅವರಂತಹ ಸ್ಟಾರ್‌ಗಳನ್ನು ಶಕೀಬ್ ಮೀರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ವಿಶ್ವಕಪ್​ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಸಚಿನ್ 45 ಪಂದ್ಯಗಳಲ್ಲಿ 56.95 ಸರಾಸರಿಯಲ್ಲಿ ಆರು ಶತಕಗಳು ಮತ್ತು 15 ಅರ್ಧಶತಕಗಳೊಂದಿಗೆ 2,278 ರನ್ ಸೇರಿಸಿದ್ದಾರೆ. ಇವರ ನಂತರ ರಿಕಿ ಪಾಂಟಿಂಗ್ (1,743 ರನ್), ಕುಮಾರ ಸಂಗಕ್ಕಾರ (1,532 ರನ್), ಬ್ರಿಯಾನ್ ಲಾರಾ (1,225 ರನ್), ಎಬಿ ಡಿವಿಲಿಯರ್ಸ್ (1,207 ರನ್) ಇದ್ದಾರೆ. ಈ ದಿಗ್ಗರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

200ನೇ ವಿಕೆಟ್​ ಪಡೆದ ಬೋಲ್ಟ್​​:ನ್ಯೂಜಿಲೆಂಡ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಈ ಪಂದ್ಯದಲ್ಲಿ ಎರಡು ವಿಕೆಟ್​ ಪಡೆಯುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 200 ವಿಕೆಟ್​ ಕಬಳಿಸಿದ ಸಾಧನೆ ಮಾಡಿದರು. ಕಿವೀಸ್​ನ ಮಾಜಿ ಆಲ್​ರೌಂಡರ್​​ ರಿಚರ್ಡ್ ಹ್ಯಾಡ್ಲೀ ಅವರನ್ನು ಹಿಂದಿಕ್ಕಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

107 ಪಂದ್ಯಗಳಲ್ಲಿ ಬೌಲ್ಟ್ 23.84 ಸರಾಸರಿಯಲ್ಲಿ 200 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (102 ಪಂದ್ಯಗಳು) ಮತ್ತು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ (104 ಪಂದ್ಯಗಳು) ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್​ ಪಡೆದ ಸಾಧನೆ ಮಾಡಿದ್ದರು.

ಇದನ್ನೂ ಓದಿ:ಶುಭ್‌ಮನ್​ ಗಿಲ್​ಗೆ 'ಐಸಿಸಿ ತಿಂಗಳ ಆಟಗಾರ' ಗೌರವ; ನಾಳೆ ಪಾಕಿಸ್ತಾನ ವಿರುದ್ಧ ಆಡಿದರೆ ನಂ.1 ಪಟ್ಟ

ABOUT THE AUTHOR

...view details