ಪಾಕಿಸ್ತಾನದ ಖತರ್ನಾಕ್ ವೇಗಿ ಶಾಹೀನ್ ಅಫ್ರಿದಿಯ ಯಾರ್ಕರ್ ಎಸೆತ ಅಫ್ಘಾನಿಸ್ತಾನದ ಆಟಗಾರನನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಆಫ್ಘನ್ ಮತ್ತು ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಎಸೆದ ಮಾರಕ ಯಾರ್ಕರ್ನಿಂದ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಕಾಲಿಗೆ ಪೆಟ್ಟು ಬಿದ್ದಿದೆ. ಇದರಿಂದ ಅವರು ಮೈದಾನದಿಂದ ನಿರ್ಗಮಿಸಿ ಚಿಕಿತ್ಸೆ ಪಡೆಯುವಂತಾಗಿದೆ.
ಏಷ್ಯಾಕಪ್ಗೂ ಮೊದಲು ಮೊಣಕಾಲು ಗಾಯಕ್ಕೀಡಾಗಿದ್ದ ಪಾಕ್ ವೇಗಿ ಶಾಹೀನ್ ವಿಶ್ವಕಪ್ಗೆ ಸಂಪೂರ್ಣ ಫಿಟ್ ಆಗಿದ್ದಾರೆ. ಅಭ್ಯಾಸ ಪಂದ್ಯದ ಮೊದಲ ಓವರ್ನ ಐದನೇ ಎಸೆತದಲ್ಲಿ ಶಾಹೀನ್ ಅಫ್ರಿದಿ ಎಸೆದ ಯಾರ್ಕರ್ ಅನ್ನು ಗುರುತಿಸುವಲ್ಲಿ ಎಡವಿದ ಆಫ್ಘನ್ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್ ಕಾಲಿಗೆ ಪೆಟ್ಟು ಮಾಡಿಕೊಂಡರು.
ಚೆಂಡು ಹಾರಿ ಬಂದು ಗುರ್ಬಾಜ್ ಬೆರಳಿಗೆ ಬಲವಾಗಿ ಬಡಿದಿದೆ. ಇದರಿಂದ ಕ್ರಿಕೆಟಿಗ ಮೈದಾನದಲ್ಲೇ ನರಳಾಡಿದ್ದಾರೆ. ಪರೀಕ್ಷೆ ನಡೆಸಿದ ಫಿಸಿಯೋಗಳು ಗಾಯ ಉಲ್ಬಣಿಸುವ ಮುನ್ನವೇ ಮೈದಾನದಿಂದ ಹೊತ್ತುಕೊಂಡು ಕರೆದೊಯ್ದಿದ್ದಾರೆ.