ಕ್ಯಾಂಡಿ (ಶ್ರೀಲಂಕಾ): ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಶನಿವಾರ 250 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ದಾಖಲೆಯನ್ನು ಮಾಡಿದ್ದಾರೆ. 23 ವರ್ಷದ ಬೌಲರ್ ಈ ಮೈಲುಗಲ್ಲನ್ನು ಏಷ್ಯಾಕಪ್ ಭಾರತದ ವಿರುದ್ಧ ಪಂದ್ಯದಲ್ಲಿ ನಾಲ್ಕು ಪಡೆದ ಅಫ್ರಿದಿ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಶಾಹೀನ್ 10 ಓವರ್‌ಗಳ ಕೋಟಾದಲ್ಲಿ ಕೇವಲ 35 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.
ಅಫ್ರಿದಿ ಆರಂಭದಲ್ಲಿ ಸ್ಟಾರ್ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ಇದಾದ ನಂತರ 87 ರನ್ ಗಳಿಸಿ ಶತಕದ ಸನಿಹದಲ್ಲಿದ್ದ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪಡೆದರು. ಅಲ್ಲದೇ ಹಾರ್ದಿಕ್ ಬೆನ್ನಲ್ಲೇ ಎಡಗೈ ಬ್ಯಾಟರ್ ಜಡೇಜ ಅವರನ್ನು ಸಹ ಪೆವಿಲಿಯನ್ಗೆ ಕಳಿಸಿದರು.
ಶಾಹೀನ್ 120 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 23.81 ಸರಾಸರಿಯಲ್ಲಿ 251 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಬಾರಿ ಐದು ವಿಕೆಟ್ ಮತ್ತು ಒಂದು ಬಾರಿ ಹತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. 27 ಟೆಸ್ಟ್‌ಗಳಲ್ಲಿ ಅವರು 25.58 ಸರಾಸರಿಯಲ್ಲಿ 105 ವಿಕೆಟ್‌ಗಳನ್ನು ಪಡೆದಿದ್ದು, 51 ರನ್ ಕೊಟ್ಟು 6 ವಿಕೆಟ್ ಕಬಳಿಸಿರುವುದು ಉತ್ತಮ ಪ್ರದರ್ಶನವಾಗಿದೆ. ಅವರು ಟೆಸ್ಟ್‌ನಲ್ಲಿ ನಾಲ್ಕು ಐದು ವಿಕೆಟ್‌ಗಳು ಮತ್ತು ಒಮ್ಮೆ ಹತ್ತು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
41 ಏಕದಿನ ಪಂದ್ಯಗಳನ್ನು ಆಡಿರುವ ಶಾಹೀನ್ 25.0 ಸರಾಸರಿಯಲ್ಲಿ 82 ವಿಕೆಟ್‌ಗಳನ್ನು ಪಡೆದರೆ, ಅದರಲ್ಲಿ 35 ರನ್ ಕೊಟ್ಟು 6 ವಿಕೆಟ್ ಪಡೆದಿರುವುದು ಅತ್ಯುತ್ತಮ ಬೌಲಿಂಗ್ ಅಂಕಿಅಂಶ ಆಗಿದೆ. ಏಕದಿನದಲ್ಲಿ ಎರಡು ಸಲ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. 52 ಟಿ20ಯಲ್ಲಿ ಶಾಹೀನ್ 22.73 ರ ಸರಾಸರಿಯಲ್ಲಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.