ಲಾಹೋರ್: ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ಸೂಪರ್ ಲೀಗ್ ಗೆಲ್ಲುವ ಮೂಲಕ ಮೇಜರ್ ಟಿ-20 ಲೀಗ್ ಗೆದ್ದ ವಿಶ್ವದ ಕಿರಿಯ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ ಫೈನಲ್ನಲ್ಲಿ ಮುಲ್ತಾನ್ ಸುಲ್ತಾನ್ ವಿರುದ್ಧ ಲಾಹೋರ್ ಕಲಂದರ್ನಲ್ಲಿ 42 ರನ್ಗಳ ಗೆಲುವು ಸಾಧಿಸಿತು. ಲಾಹೋರ್ 7 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತ್ತು. 21 ವರ್ಷದ ಶಾಹೀನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಟಿ20 ಲೀಗ್ ಗೆದ್ದ ಕಿರಿಯ ನಾಯಕ ಎಂಬ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.
ಈ ಹಿಂದಿನ ದಾಖಲೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹೆಸರಿನ್ನಲ್ಲಿತ್ತು. ಅವರು ತಮ್ಮ 22ನೇ ವಯಸ್ಸಿನಲ್ಲಿ 2012ರ ಬಿಗ್ಬ್ಯಾಶ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಯಾವುದೇ ವಿಭಾಗದ ಕ್ರಿಕೆಟ್ನಲ್ಲಿ ನಾಯಕತ್ವದ ಅನುಭವ ಇಲ್ಲದೇ ಶಾಹೀನ್ ಅಫ್ರಿದಿಗೆ ಲಾಹೋರ್ ಫ್ರಾಂಚೈಸಿ ನಾಯಕತ್ವ ನೀಡಿದಾಗ ಕ್ರಿಕೆಟ್ ಜಗತ್ತು ಆಶ್ಚರ್ಯ ವ್ಯಕ್ತಪಡಿಸಿತ್ತು. ಆದರೆ, ಭಾನುವಾರ ಲಾಹೋರ್ ಮ್ಯಾನೇಜ್ಮೆಂಟ್ ತೆಗೆದುಕೊಂಡಿದ್ದು ಸರಿಯಾದ ನಿರ್ಧಾರ ಎಂದು ಅಫ್ರಿದಿ ಸಾಬೀತುಪಡಿಸಿದರು.