ಕರ್ನಾಟಕ

karnataka

ETV Bharat / sports

ಶಹೀನ್​ ಅಫ್ರಿದಿ ಮಾರಕ ಬೌಲಿಂಗ್: 2ನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಪಾಕಿಸ್ತಾನ​​

152 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ವೇಗವಾಗಿ 6 ವಿಕೆಟ್​ ಕಳೆದುಕೊಂಡು 176 ರನ್​ಗಳಿಸಿ 4ನೇ ದಿನದಾಂತ್ಯಕ್ಕೆ ಒಂದು ಗಂಟೆ ಇರುವಾಗ ಡಿಕ್ಲೇರ್ ಘೋಷಿಸಿಕೊಂಡಿತು. ಒಟ್ಟಾರೆ ಆತಿಥೇಯ ವೆಸ್ಟ್​ ಇಂಡೀಸ್ ತಂಡಕ್ಕೆ ಗೆಲ್ಲಲು 130 ಓವರ್​ಗಳಲ್ಲಿ 329 ರನ್​ಗಳ ಗುರಿ ನೀಡಿತು.

Pakistan on top in 2nd Test vs West Indies
ಪಾಕಿಸ್ತಾನ vs ವೆಸ್ಟ್​ ಇಂಡೀಸ್​

By

Published : Aug 24, 2021, 3:56 PM IST

ಕಿಂಗ್​ಸ್ಟನ್​(ಜಮೈಕಾ): ವೆಸ್ಟ್​ ಇಂಡೀಸ್​ ವಿರುದ್ಧ 2ನೇ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಗೆಲುವಿನ ಸನಿಹ ಬಂದಿದೆ. 2 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಕಳೆದುಕೊಂಡಿರುವ ಪಾಕಿಸ್ತಾನ 2ನೇ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ 329ರನ್​ಗಳ ಬೃಹತ್​ ಟಾರ್ಗೆಟ್ ನೀಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ 302 ರನ್​ಗಳಿಸಿ ಡಿಕ್ಲೇರ್​ ಘೋಷಿಸಿದ್ದ ಪಾಕಿಸ್ತಾನ, ವೆಸ್ಟ್​ ಇಂಡೀಸ್ ತಂಡವನ್ನು ಕೇವಲ 150 ರನ್​ಗಳಿಂದ ಆಲೌಟ್ ಮಾಡಿ 152 ರನ್​ಗಳ ಮುನ್ನಡೆ ಸಾಧಿಸಿತ್ತು. ಮೊಹಮ್ಮದ್ ಅಬ್ಬಾಸ್​ 44ಕ್ಕೆ3 ಶಹೀನ್ ಶಾ ಅಫ್ರಿದಿ 51ಕ್ಕೆ 6 ವಿಕೆಟ್ ಪಡೆದಿದ್ದರು.

152 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ವೇಗವಾಗಿ 6 ವಿಕೆಟ್​ ಕಳೆದುಕೊಂಡು 176 ರನ್​ಗಳಿಸಿ 4ನೇ ದಿನದಂತ್ಯಕ್ಕೆ ಒಂದು ಗಂಟೆ ಇರುವಾಗ ಡಿಕ್ಲೇರ್ ಘೋಷಿಸಿಕೊಂಡಿತು. ಒಟ್ಟಾರೆ ಆತಿಥೇಯ ವೆಸ್ಟ್​ ಇಂಡೀಸ್ ತಂಡಕ್ಕೆ ಗೆಲ್ಲಲು 130 ಓವರ್​ಗಳಲ್ಲಿ 329 ರನ್​ಗಳ ಗುರಿ ನೀಡಿತು.

ಇನ್ನು ಬೃಹತ್ ಗುರಿ ಪಡೆದ ವೆಸ್ಟ್​ ಇಂಡೀಸ್​ ಎರಡನೇ ಇನ್ನಿಂಗ್ಸ್​ನಲ್ಲಿ ಈಗಾಗಲೇ 23 ರನ್​ಗಳಿಸಿದ್ದ ಕೀರನ್ ಪೊವೆಲ್ ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ನಾಯಕ ಕ್ರೈಗ್ ಬ್ರಾಥ್​ವೇಟ್​ ಅಜೇಯ 17 ರನ್​ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಪ್ರಸ್ತುತ 49ಕ್ಕೆ 1ರನ್​ಗಳಿಸಿದೆ. ಕೊನೆಯ ದಿನ ಪಂದ್ಯ ಗೆಲ್ಲಲು 90 ಓವರ್​ಗಳಲ್ಲಿ ವೆಸ್ಟ್​ ಇಂಡೀಸ್​ 280 ರನ್​ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್​:

ಪಾಕಿಸ್ತಾನ ಮೊದಲ ಇನ್ನಿಂಗ್ಸ್​ 302/9 ಡಿಕ್ಲೇರ್: ಫವಾದ್​ ಆಲಂ 124, ಬಾಬರ್ ಅಜಮ್ 75, ರೋಚ್​ 68ಕ್ಕೆ3, ಜೇಡನ್ ಸೀಲ್ಸ್​ 31ಕ್ಕೆ3

ವೆಸ್ಟ್ ಇಂಡೀಸ್​ ಮೊದಲ ಇನ್ನಿಂಗ್ಸ್​ 150ಕ್ಕೆ ಆಲೌಟ್:ಎನ್‌ಕ್ರುಮಾ ಬೋನರ್ 37, ಬ್ಲಾಕ್​ವುಡ್​ 33, ಶಹೀನ್​ ಅಫ್ರಿದಿ 51ಕ್ಕೆ 6, ಮೊಹಮ್ಮದ್ ಅಬ್ಬಾಸ್​ 44ಕ್ಕೆ 3

ಪಾಕಿಸ್ತಾನ 2ನೇ ಇನ್ನಿಂಗ್ಸ್​ನಲ್ಲಿ 176ಕ್ಕೆ6 ಡಿಕ್ಲೇರ್​: ಇಮ್ರಾನ್ ಬಟ್​ 37, ಬಾಬರ್ ಅಜಮ್ 33, ಅಬಿದ್​ ಅಲಿ 29, ಹೋಲ್ಡರ್​ 27ಕ್ಕೆ2, ಅಲ್ಜಾರಿ ಜೋಸೆಫ್​ 24ಕ್ಕೆ2

ವೆಸ್ಟ್​ ಇಂಡೀಸ್​ 49ಕ್ಕೆ1: ಕೀರನ್ ಪೋವೆಲ್ 23, ಕ್ರೈಗ್ ಬ್ರಾಥ್​ವೇಟ್​ 17*

ಇದನ್ನು ಓದಿ:ಅವಕಾಶಕ್ಕಾಗಿ 11 ವರ್ಷ ಕಾದಿದ್ದ ಕ್ರಿಕೆಟಿಗ... ಈಗ ವೇಗವಾಗಿ 5 ಶತಕ ಸಿಡಿಸಿದ ಏಷ್ಯಾ ಬ್ಯಾಟ್ಸ್​ಮನ್

ABOUT THE AUTHOR

...view details