ರಾಂಚಿ :ದಕ್ಷಿಣ ಆಫ್ರಿಕ ಮತ್ತು ಭಾರತದ 2ನೇ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಕೇಶವ ಮಹಾರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹರಿಣಗಳಿಗೆ ಮೊದಲ ಆಘಾತವನ್ನು ಸಿರಾಜ್ ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆಯುವ ಮೂಲಕ ನೀಡಿದರು. ಭಾರತಕ್ಕೆ ಎರಡನೇ ವಿಕೆಟನ್ನು ಶಹಬಾಜ್ ಅಹ್ಮದ್ ತಂದುಕೊಟ್ಟರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ವಿಕೆಟ್ ಆಗಿದೆ.
ಜನೆಮನ್ ಮಲನ್ ಅವರನ್ನು ಲೆಗ್ ಬಿಫೋರ್ ವಿಕೆಟ್ ಮಾಡುವ ಮೂಲಕ ಅವರ ಚೊಚ್ಚಲ ಪಡೆದರು. ವಿಕೆಟ್ ಪಡೆದು ಸಂಭ್ರಮಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ಆಫೀಶಿಯಲ್ ಟ್ವಿಟರ್ ಹ್ಯಾಡಲ್ನಲ್ಲಿ ಹಂಚಿಕೊಂಡಿದೆ. ಇಂದಿನ ಪಂದ್ಯ ಮುಖಾಂತರ ಬೌಲಿಂಗ್ ಆಲ್ರೌಂಡರ್ ಶಹಬಾಜ್ ಅಹ್ಮದ್ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು.