ನವದೆಹಲಿ: ಭಾರತ ಮಹಿಳಾ ತಂಡದ ಸೂಪರ್ ಸ್ಟಾರ್ ಶೆಫಾಲಿ ವರ್ಮಾ ಮುಂಬರುವ ವುಮೆನ್ಸ್ ಬಿಗ್ಬ್ಯಾಶ್ನಲ್ಲಿ 2 ಬಾರಿಯ ಚಾಂಪಿಯನ್ ಸಿಡ್ನಿ ಸಿಕ್ಸರ್ ಪರ ಪದಾರ್ಪಣೆ ಮಾಡಲಿದ್ದಾರೆ.
17 ವರ್ಷದ ಸ್ಫೋಟಕ ಬ್ಯಾಟರ್ ಎಡಗೈ ಸ್ಪಿನ್ನರ್ ರಾಧ ಯಾದವ್ ಜೊತೆಗೆ ಸಿಡ್ನಿ ಸಿಕ್ಸರ್ ಜೊತೆ ಆಡುವ ನಿರೀಕ್ಷೆಯಲ್ಲಿದ್ದಾರೆ. ರಾಧ ಜೊತೆ ಸಿಕ್ಸರ್ ಫ್ರಾಂಚೈಸಿ ಮಾತುಕತೆ ನಡೆಸುತ್ತಿದೆ.
ಶೆಫಾಲಿ ಒಪ್ಪಂದ ಮುಗಿದಿದೆ. ವುಮೆನ್ಸ್ ಬಿಗ್ಬ್ಯಾಶ್ ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಇದನ್ನು ಫ್ರಾಂಚೈಸಿ ಘೋಷಿಸಲಿದೆ. ಇನ್ನು ರಾಧ ಯಾದವ್ ಕೂಡ್ ಸಿಡ್ನಿ ಸಿಕ್ಸರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.
ಇನ್ನು ಶೆಪಾಲಿ ಇನ್ನೂ ಮೈನರ್ ಆಗಿರುವುದರಿಂದ ಅವರ ತಂದೆಯೂ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಬೇಕಿದೆ. ಶೆಫಾಲಿ ಟಿ-20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್( ಸಿಡ್ನಿ ಥಂಡರ್) ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ(ಬ್ರಿಸ್ಬೇನ್ ಹೀಟ್) ಮತ್ತು ಆಲ್ರೌಂಡರ್ ವೇದಾ ಕೃಷ್ಣಮೂರ್ತಿ (ಹೋಬರ್ಟ್ ಹರಿಕೇನ್ಸ್) ಜೊತೆಗೆ ವುಮೆನ್ಸ್ ಬಿಬಿಎಲ್ನಲ್ಲಿ ಭಾಗವಹಿಸಲಿದ್ದಾರೆ.
ವಿಶ್ವದ ನಂಬರ್ ಒನ್ ಟಿ-20 ಆಟಗಾರ್ತಿಯಾಗಿರುವ ಶೆಫಾಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ಫೊಯಿನಿಕ್ಸ್ ತಂಡದ ಪರ ಆಡಲಿದ್ದಾರೆ. 100 ಎಸೆತಗಳ ಈ ಲೀಗ್ ಜುಲೈ 21ರಿಂದ ಆರಂಭವಾಗಲಿದೆ. ಡಬ್ಲ್ಯುಬಿಬಿಎಲ್ ಈ ವರ್ಷದ ಕೊನೆಯಲ್ಲಿ ನಡೆಯಲಿದೆ.
ಇದನ್ನು ಓದಿ:ಸರಣಿ ವೇಳೆ ಗೊಂದಲ ಉಂಟು ಮಾಡಿ ಲಾಭ ಪಡೆಯುವುದರಲ್ಲಿ ಭಾರತೀಯರು ನಿಸ್ಸೀಮರು: ನಾಲಿಗೆ ಹರಿಬಿಟ್ಟ ಪೇನ್