ಕರ್ನಾಟಕ

karnataka

ETV Bharat / sports

Asia Cup 2023: ಏಷ್ಯಾಕಪ್​ಗೂ ಮುನ್ನ ಲಂಕಾಗೆ ಭಾರಿ ಹಿನ್ನಡೆ.. ನಾಲ್ವರು ಆಟಗಾರರು ತಂಡಕ್ಕೆ ಅಲಭ್ಯ?

ಏಷ್ಯಾಕಪ್​ಗೂ ಮುನ್ನ ಲಂಕಾ ತಂಡಕ್ಕೆ ನಾಲ್ವರು ಆಟಗಾರರು ಅಲಭ್ಯರಾಗುವ ಸಾಧ್ಯತೆ ಇದೆ.

By ETV Bharat Karnataka Team

Published : Aug 26, 2023, 4:19 PM IST

Asia Cup 2023
Asia Cup 2023

ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಆರಂಭಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಅಲ್ಲದೇ ವಿಶ್ವಕಪ್​​ಗೆ ಹೆಚ್ಚು ಕಡಿಮೆ ಒಂದು ತಿಂಗಳು ಮಾತ್ರ ಇದೆ. ಈ ವೇಳೆ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತವೇ ಎದುರಾಗಿದೆ. ಏಷ್ಯಾಕಪ್​ ಸಂದರ್ಭದಲ್ಲಿ ನಾಲ್ವರು ಆಟಗಾರರು ಲಂಕಾಗೆ ಅಲಭ್ಯರಾಗಲಿದ್ದಾರೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಲಂಕಾದ ಇಬ್ಬರು ಆಟಗಾರರು ಕೋವಿಡ್​ಗೆ ತುತ್ತಾದರೆ, ಇಬ್ಬರು ಗಾಯಗೊಂಡಿದ್ದಾರೆ.

ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿರುವ ಕುಸಾಲ್ ಪೆರೇರಾ ಮತ್ತು ಅವಿಷ್ಕಾ ಫೆರ್ನಾಂಡೋ ಅವರು ಕೊವಿಡ್​​ ಪರೀಕ್ಷೆ ನಡೆಸಿದ್ದು, ಪಾಸಿಟಿವ್​ ಬಂದಿದೆ. ಪ್ರಸ್ತುತ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರು ಎಷ್ಟು ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರು ತಂಡದ ಭಾಗವಾಗಿರಲಿದ್ದಾರಾ ಎಂಬುದು ತಿಳಿದುಬರಲಿದೆ.

ಇತ್ತೀಚಿನ ಮುಕ್ತಾಯವಾದ ಲಂಕಾ ಪ್ರೀಮಿಯರ್ ಲೀಗ್ (LPL)ನಲ್ಲಿ ತಂಡದ ಸ್ಟಾರ್ ವೇಗಿ ದುಷ್ಮಂತ ಚಮೀರ ಮತ್ತು ಸ್ಪಿನ್ನರ್ ವನಿಂದು ಹಸರಂಗ ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ದುಷ್ಮಂತ ಚಮೀರ ಏಷ್ಯಾಕಪ್​ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ಇದ್ದು, ಹಸರಂಗ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಹಸರಂಗ ಏಷ್ಯಾ ಕಪ್ ಗುಂಪು ಹಂತದಲ್ಲಿ ಪಂದ್ಯದಲ್ಲಿ ಅಂದರೆ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಿಗೆ ಆಡುವುದು ಅನುಮಾನವಾಗಿದೆ. ತವರು ಮೈದಾನದಲ್ಲಿ ಹೆಚ್ಚು ಪರಿಣಾಮಕಾರಿ ಸ್ಪನ್ನರ್​ ಆರಂಭಿಕ ಪಂದ್ಯಗಳಲ್ಲಿ ಆಡದಿರುವುದು ಸಿಂಹಳೀಯರಿಗೆ ಹಿನ್ನಡೆಯಾಗಲಿದೆ.

ಎಲ್‌ಪಿಎಲ್‌ನಲ್ಲಿ ಹಸರಂಗ ಅದ್ಭುತ ಆಲ್​ರೌಂಡರ್​ ಪ್ರದರ್ಶನ ನೀಡಿದ್ದರು. ಲೀಗ್​ನಲ್ಲಿ ಹೆಚ್ಚು ಸ್ಕೋರ್​ ಗಳಿಸಿದ ಮತ್ತು ಹೆಚ್ಚು ವಿಕೆಟ್​ ಪಡೆದ ಆಟಗಾರರಲ್ಲಿ ಇವರೂ ಇದ್ದಾರೆ. ಚಮೀರಾ ಅವರನ್ನು ಆಗಾಗ್ಗೆ ದಿಲ್ಶನ್ ಮಧುಶಂಕ, ಕಸುನ್ ರಜಿತಾ ಮತ್ತು ಅಸಿತಾ ಫೆರ್ನಾಂಡೋ ಅವರ ಸ್ಥಾನಕ್ಕೆ ತರಲಾಗಿತ್ತು. ಹೀಗಾಗಿ ವೇಗಿಯ ಜಾಗಕ್ಕೆ ಪರ್ಯಾಯ ಆಟಗಾರರಿದ್ದಾರೆ. ಆದರೆ ಹಸರಂಗಾಗೆ ಸುಕ್ತ ಪರ್ಯಾಯ ಆಟಗಾರ ಇಲ್ಲದಿರುವುದು ಲಂಕಾಗೆ ತಲೆನೋವಾಗಲಿದೆ.

2023ರ ಏಷ್ಯಾಕಪ್ ಪಾಕಿಸ್ತಾನ ಮತ್ತು ಶ್ರೀಲಂಕಾದ ಸಹಯೋಗದೊಂದಿಗೆ ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಶ್ರೀಲಂಕಾ ಆಗಸ್ಟ್ 31 ರಂದು ಬಾಂಗ್ಲಾದೇಶದ ವಿರುದ್ಧ ಏಷ್ಯಾಕಪ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ನಂತರ ಸೆಪ್ಟೆಂಬರ್​ 5 ರಂದು ಲೀಗ್​ನ ಕೊನೆಯ ಪಂದ್ಯವನ್ನು ಅಫ್ಘಾನಿಸ್ತಾನದ ಜೊತೆಗೆ ಆಡಲಿದೆ.

ಇದನ್ನೂ ಓದಿ:Asia Cup 2023: ವಾಘಾ ಗಡಿ ಮೂಲಕ ಲಾಹೋರ್​ಗೆ ತೆರಳಲಿದ್ದಾರೆ ರೋಜರ್ ಬಿನ್ನಿ, ರಾಜೀವ್ ಶುಕ್ಲಾ

ABOUT THE AUTHOR

...view details