ಮುಂಬೈ (ಮಹಾರಾಷ್ಟ್ರ): ಬಹುನಿರೀಕ್ಷತ ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಲಿದೆ. 23ನ ದಿನ ನಡೆಯುವ ಮಹಿಳಾ ಲೀಗ್ನ ಚುಟುಕು ಸಮರಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದಿದ್ದಾರೆ. ಮೊದಲ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಪಂದ್ಯಾರಂಭಕ್ಕೂ ಮುನ್ನ ಬಾಲಿವುಡ್ ತಾರೆಯರಿಂದ ಮನರಂಜನೇ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತನಾಡಿದ್ದು, ಹಿರಿಯ ಆಟಗಾರರು ಸಹ ಕಲಿಯಲು ಈ ಲೀಗ್ ವೇದಿಕೆಯಾಗಿದೆ. ಯುವ ಆಟಗಾರರಿಗೆ ಅನುಭವಿಗಳೊಂದಿದ ಮುಕ್ತವಾಗಿ ಬೆರೆಯಲು ಅವಕಾಶ ಸಿಗಲಿದೆ ಎಂದಿದ್ದಾರೆ.
"ತಂಡಕ್ಕೆ ಬರುವ ಯುವ ಆಟಗಾರನಿಗೆ ಹಿರಿಯ ಆಟಗಾರರೊಂದಿಗೆ ಸಂವಹನ ನಡೆಸುವುದು ತುಂಬಾ ಕಷ್ಟಕರವಾಗಿದೆ. ನನ್ನ ಆರಂಭಿಕ ದಿನಗಳಿಂದಲೂ ನಾನು ಇದನ್ನು ನೆನಪಿಸಿಕೊಳ್ಳುತ್ತೇನೆ. ನಾನು ಭಾರತ ತಂಡಕ್ಕೆ ಬಂದಾಗ, ಜುಲು ದೀದಿ (ಜೂಲನ್ ಗೋಸ್ವಾಮಿ) ಮತ್ತು ಅಂಜು ದೀದಿ (ಅಂಜುಮ್ ಚೋಪ್ರಾ) ಅವರು ನನ್ನೊಂದಿಗೆ ಆರಾಮವಾಗಿದ್ದರು, ಅವರೇ ನನ್ನ ಬಳಿಗೆ ಬಂದು ಮಾತನಾಡುತ್ತಿದ್ದರು. ಅವರೂ ನನ್ನ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದರು. ಇದೇ ನಿಯಮವನ್ನು ನಾನು ಪಾಲಿಸುತ್ತೇನೆ ಹೊಸಬರೊಂದಿಗೆ ಮುಕ್ತವಾಗಿ ಬೆರೆಯಲು ಬಯಸುತ್ತೇನೆ" ಎಂದಿದ್ದಾರೆ.
"ನಮ್ಮ ತಂಡದ ಧಾರಾ ಗುಜ್ಜರ್ ಅಭ್ಯಾಸ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಧಾರಾಳ ಆಟದ ವಿಧಾನ ಮತ್ತು ರನ್ನಿಂಗ್ ಬಿಟ್ವಿನ್ ದ ವಿಕೆಟ್ ತುಂಬಾ ಚೆನ್ನಾಗಿದೆ. ಹಿರಿಯರಾದ ನಾವು ಸಹ ಯುವ ಆಟಗಾರರಿಂದ ಬಹಳಷ್ಟು ಕಲಿಯಲಿದ್ದೇವೆ. ಈ ವೇದಿಕೆಯು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಕಿರಿಯರು ಹೊಸ ಪ್ರಶ್ನೆಗಳೊಂದಿಗೆ ನಮ್ಮ ಮುಂದೆ ಬಂದಾಗ ಸಂತೋಷವಾಗುತ್ತದೆ" ಎಂದಿದ್ದಾರೆ.
"ಈ ಹಿಂದೆ, ದೇಶೀಯ ಆಟಗಾರರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಮಾತನಾಡಲು ನನಗೆ ಸಾಕಷ್ಟು ಅವಕಾಶ ಸಿಗಲಿಲ್ಲ. ಅವರು ಯಾವ ರೀತಿಯ ಕ್ರಿಕೆಟ್ ಆಡಲು ಮತ್ತು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಅರಿಯಬಹುದು. ಎಂಐನಲ್ಲಿ ಅಂಡರ್ - 19 ಆಡಿದ ಸೋನಮ್ ಯಾದವ್ ಇದ್ದಾರೆ. ಅವರೊಂದಿಗೆ ನಿನ್ನೆ ಮಾತನಾಡಿದಾಗ ನಾನು ಹೇಗೆ ಬೌಲಿಂಗ್ ಮಾಡುತ್ತಿದ್ದೇನೆ ಎಂದು ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಬಗ್ಗೆ ಪ್ರಶ್ನಿಸಿದಳು" ಎಂದರು.
"ನಾವು ಸಾಕಷ್ಟು ತಂಡದಲ್ಲಿ ಆಡಿದ್ದನೇ ಎಂದು ನಾನು ಭಾವಿಸುತ್ತೇನೆ. ಒಟ್ಟಿಗೆ ಮೋಜು ಮಾಡಿದಾಗ, ಅದು ನಿಮಗೆ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತದೆ. ಸಾಗರೋತ್ತರ ಆಟಗಾರರು ತುಂಬಾ ಸ್ನೇಹಪರರಾಗಿದ್ದಾರೆ. ಕೆಲವು ಆಟಗಾರರಿಗೆ ಇಂಗ್ಲಿಷ್ ಮಾತನಾಡಲು ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ನಾನು ಯಾವಾಗಲೂ WBBL ನೆನಪಿಸಿಕೊಳ್ಳುತ್ತೇನೆ. ಅಲ್ಲಿಗೆ ಹೋದಾಗ ನನಗೆ ಹೆಚ್ಚು ಮಾತನಾಡಲಾಗಲಿಲ್ಲ. ಆದರೆ, ನಾನು ನನ್ನ ಕಂಫರ್ಟ್ ಝೋನ್‌ನಿಂದ ಹೊರಗೆ ಹೋಗಿ ಭಾಷೆ ಕಲಿತೆ" ಎಂದು ಮಹಿಳಾ ಬಿಗ್ ಬ್ಯಾಷ್ ಲೀಗ್ ಮತ್ತು ದಿ ಹಂಡ್ರೆಡ್‌ನಲ್ಲಿ ಆಡಿದ ನೆನಪುಗಳನ್ನು ಹಂಚಿಕೊಂಡರು.
"ತಂಡದೊಂದಿಗೆ ಎಲ್ಲರೂ ಬೆರೆಯುವಂತೆ ಮಾಡಲು ಎಲ್ಲರೂ ಮಾತನಾಡಿಕೊಂಡಿರುವುದು ಅಗತ್ಯ. ಎಲ್ಲರೂ ಒಂದೇ ರೀತಿ ಬೆರೆತಿದ್ದರೆ, ತಂಡ ಉತ್ತಮವಾಗಿ ಪ್ರದರ್ಶನ ನೀಡುತ್ತದೆ. ಸಾಗರೋತ್ತರ ಆಟಗಾರರು ನಮ್ಮ ಯುವತಿಯರನ್ನು ಆರಾಮದಾಯಕವಾಗಿಸಲು ಹೆಚ್ಚು ಸಂವಹನ ಮಾಡುವಂತೆ ಸೂಚಿಸುತ್ತೇನೆ. ನಾವು ಹೆಚ್ಚು ಮಾತನಾಡಿಕೊಳ್ಳುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ" ಎಂದಿದ್ದಾರೆ.
WPLನ ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಸೆಣಸಲಿವೆ. ಲೀಗ್ ಹಂತದ ಅಂತಿಮ ಪಂದ್ಯವು ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಾರ್ಚ್ 21 ರಂದು ಬ್ರಬೋರ್ನ್ ಸ್ಟೇಡಿಯಂ ನಡೆಯಲಿದೆ. ಮಾರ್ಚ್ 24 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಮಹಿಳೆಯರ ಪ್ರೀಮಿಯರ್ ಲೀಗ್ 2023 ರ ಫೈನಲ್ ಮಾರ್ಚ್ 26 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದನ್ನೂ ಓದಿ:ಇಂದೋರ್ ಪಿಚ್ಗೆ ಕಳಪೆ ರೇಟಿಂಗ್.. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇನ್ನಿಲ್ಲವೇ ಅವಕಾಶ?