ಹೊಸದಿಲ್ಲಿ :ಟೀಂ ಇಂಡಿಯಾ ಆಲ್‌ರೌಂಡರ್, ಮಿಡಲ್ ಬ್ಯಾಟರ್ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಕೊರತೆಯಿಂದ ಹೊರ ಬಂದಿದ್ದಾರೆ. ತಮ್ಮ ಮುಂದಿನ ಗುರಿಯ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದ ಪಾಂಡ್ಯ ಹೆಚ್ಚು ಬೌಲಿಂಗ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಆಯ್ಕೆ ಸಮಿತಿ ಸೇರಿದಂತೆ ತಂಡದ ಸಹ ಆಟಗಾರರಿಗೂ ಇವರ ನಿರ್ಧಾರ ಅಚ್ಚರಿ ತಂದಿತ್ತು. ಸದ್ಯ ಈ ಸಮಸ್ಯೆಯಿಂದ ಹೊರ ಬಂದಿರುವ ಮಿಡಲ್ ಬ್ಯಾಟರ್ ಪಾಂಡ್ಯ, ತಮ್ಮ ಮುಂದಿನ ಕನಸು ಏನು ಅನ್ನೋದನ್ನು ಬಹಿರಂಗ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ 1000ನೇ ಏಕದಿನ ಪಂದ್ಯಕ್ಕೆ ಸಕಲ ಸಿದ್ದತೆ : ಈ ಐತಿಹಾಸಿಕ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ?
ಫ್ರಾಂಚೈಸಿಯ ಸಂವಾದದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಯಾವ ಸ್ಥಿತಿಯಲ್ಲಿದ್ದೇನೆ ಎಂಬುವುದು (ಫ್ರಾಂಚೈಸಿ) ಅವರಿಗೆ ಗೊತ್ತಿದೆ. ಸದ್ಯ ನನ್ನ ಫಿಟ್‌ನೆಸ್ ಬಗ್ಗೆ ನಾನು ಅವರಲ್ಲಿ ಮನವರಿಕೆ ಮಾಡಿಕೊಂಡಿರುವೆ. ಅವರು ನನ್ನ ನಿಲುವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.
ಅಹ್ಮದಾಬಾದ್ ತಂಡದ ನಾಯಕ : ಪಾಂಡ್ಯ ಬೆನ್ನಿನ ಸಮಸ್ಯೆಯಿಂದ ಕಳೆದ 2 ವರ್ಷಗಳಿಂದ ಹೆಚ್ಚು ಬೌಲಿಂಗ್ ಮಾಡದೇ ಇರಬಹುದು. ಆದರೆ, ಮುಂಬರುವ ಲೀಗ್‌ನಲ್ಲಿ ಅವರು ಅಹಮದಾಬಾದ್ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದು, ಇದು ಹಲವರಿಗೆ ಅಚ್ಚರಿ ತಂದಿದೆ. ಹೊಸ ಉತ್ಸಾಹದಲ್ಲಿರುವ ಪಾಂಡ್ಯ ಬದಲಾವಣೆ ಮಾಡಲಿದ್ದಾರೆ ಅನ್ನೋದನ್ನು ತೆಗಳುವಂತಿಲ್ಲ.
ಸ್ವದೇಶಿ ಸರಣಿಯಿಂದ ದೂರ :ಫೆಬ್ರವರಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಸರಣಿ ನಡೆಯಲಿದೆ. ಭಾರತ ತಂಡದಿಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪರಿಗಣಿಸಲಾಗಿಲ್ಲ. ಬೌಲಿಂಗ್ನಲ್ಲಿ ಇನ್ನೂ ಫಿಟ್‌ನೆಸ್ ಕಾಯ್ದುಕೊಳ್ಳುವ ಉದ್ದೇಶದಿಂದ ಅವರನ್ನು (ಹಾರ್ದಿಕ್ ಪಾಂಡ್ಯ) ಕೈಬಿಡಲಾಗಿದೆ.