ಹೈದರಾಬಾದ್ :ಇಂದು ವಿಶ್ವ ತಾಯಂದಿರ ದಿನ. ಜಗತ್ತಿನಾದ್ಯಂತ ಜನರು ತಮ್ಮ ತಾಯಂದಿರಿಗೆ ತಮ್ಮದೇಯಾದ ರೀತಿ ಶುಭಾಷಯ ಕೋರುತ್ತಿದ್ದಾರೆ. ಹಾಗೆಯೇ, ಭಾರತೀಯ ಕ್ರಿಕೆಟಿಗರು ತಮ್ಮ ಅಮ್ಮಂದಿರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಹೇಳಿದ್ದಾರೆ.
ವಿಶ್ವ ತಾಯಂದಿರ ದಿನ.. ವಿಶೇಷ ಲೇಖನಗಳೊಂದಿಗೆ ಅಮ್ಮಂದಿರಿಗೆ ಶುಭ ಕೋರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು.. - ವಿಶ್ವ ತಾಯಂದಿರ ದಿನ
ಭಾರತದ ಮಾಜಿ ಕ್ರಿಕೆಟಿಗ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ತಾಯಿಗೆ ಧನ್ಯವಾದ ಹೇಳಿದರೆ, ವೀರೇಂದ್ರ ಸೆಹ್ವಾಗ್ ತಮ್ಮ ತಾಯಿಗೆ ಹಿಂದಿಯಲ್ಲಿ ಭಾವನಾತ್ಮಕ ಕವಿತೆ ಬರೆದು ಶುಭಾಶಯ ತಿಳಿಸಿದ್ದಾರೆ..
"ನೀವು ಎಷ್ಟೇ ವಯಸ್ಸಾದರೂ ನನಗಾಗಿ ಪ್ರಾರ್ಥಿಸುವವರು, ತಾಯಿ ನಾನು ಯಾವಾಗಲೂ ನಿಮ್ಮ ಮಗು ನನ್ನ ಜೀವನದಲ್ಲಿ ಇಬ್ಬರು ತಾಯಂದಿರು ನನ್ನನ್ನು ಪೋಷಿಸಿ ಪ್ರೀತಿಸುತ್ತಿದ್ದರು, ಅವರು ಆಯಿ ಹಾಗೂ ಕಾಕು ನನಗೆ ತುಂಬಾ ಸಂತಸವಾಗಿದೆ, ನಾನು ಇಲ್ಲಿ ಕೆಲ ಹಳೆಯ ಫೋಟೋಗಳನ್ನು ಹಂಚಿಕೊಳ್ಳುವೆ" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ "ಯಾವಾಗಲೂ ನನ್ನ ಶಕ್ತಿಯ ಆಧಾರಸ್ತಂಭವಾಗಿದ್ದಕ್ಕಾಗಿ ಮತ್ತು ಸರಿಯಾದ ಮಾರ್ಗದರ್ಶನವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಅಮ್ಮ.. ನೀವು ನನ್ನ ಅತಿದೊಡ್ಡ ಸ್ಫೂರ್ತಿ. ತಾಯಂದಿರ ದಿನದಂದು ಎಲ್ಲಾ ಪ್ರಬಲ ಅಮ್ಮಂದಿರಿಗೆ ಶುಭ ಹಾರೈಸುತ್ತೇನೆ #LoveYouMa" ಎಂದು ರೈನಾ ಟ್ವೀಟ್ ಮಾಡಿದ್ದಾರೆ.
TAGGED:
ವಿಶ್ವ ತಾಯಂದಿರ ದಿನ