ಟಿ20 ವಿಶ್ವಕಪ್‌ನಲ್ಲಿ ಬಿರುಗಾಳಿಯಂತಹ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಲೋಕವೇ ಹುಬ್ಬೇರಿಸುವಂತೆ ಮಾಡಿದ ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಅತ್ಯಂತ ಕಡಿಮೆ ಸಮಯದಲ್ಲಿ ಸಾಧನೆಯ ಶಿಖರವನ್ನೇರುತ್ತಿದ್ದಾರೆ. ಇದಕ್ಕಾಗಿ ಅವರು ಅನುಸರಿಸುತ್ತಿರುವ ಅತ್ಯುತ್ತಮ ಆಹಾರ ಪದ್ಧತಿಯೂ ಕೂಡಾ ಬಹುಮುಖ್ಯಪಾತ್ರ ವಹಿಸುತ್ತಿದೆ. ಈ ವಿಚಾರವನ್ನು ಅವರೇ ಮಾಧ್ಯಮಗಳಿಗೆ ಹೇಳಿದ್ದಾರೆ.
ಸೂರ್ಯ ಅವರ ಆಹಾರ ಪದ್ಧತಿಯು ಪಂಚಸೂತ್ರಗಳಿಂದ ಕೂಡಿದೆ. ಮೊದಲನೆಯದು ಕಟ್ಟುನಿಟ್ಟಿನ ತರಬೇತಿಯ ಮೂಲಕ ಪ್ರತಿ ಪಂದ್ಯದಲ್ಲೂ ಕ್ಷಮತೆ ಹೆಚ್ಚಿಸುವುದು, ಎರಡನೆಯದು ದೇಹದ ಬೊಜ್ಜು (ಶೇ12-15) ಕಡಿಮೆಗೊಳಿಸುವುದು, ಮೂರನೆಯಾದಾಗಿ ಮನಸ್ಸು, ದೇಹ ಸದಾ ಲವಲವಿಕೆಯಿಂದಿರುವಂತೆ ನೋಡಿಕೊಳ್ಳುವುದು, ನಾಲ್ಕನೆಯದು ಬಯಕೆಗಳ ನಿಯಂತ್ರಣ ಹಾಗು ಕೊನೆಯಾದಾಗಿ ಸೋಲಿನಿಂದ ಬೇಗ ಚೇತರಿಕೆ ಕಾಣುವುದು. ಈ ಐದು ಅಂಶಗಳು ಕ್ರೀಡಾಪಟುಗಳಿಗೆ ಅತ್ಯಂತ ಮುಖ್ಯ ಎನ್ನುತ್ತಾರೆ ಸೂರ್ಯ ಕುಮಾರ್ ಯಾದವ್. ಮೀನು, ಮೊಟ್ಟೆ, ಮಾಂಸ ಸೇವನೆ ಇವರು ಪೌಷ್ಟಿಕಾಂಶಯುಕ್ತ ಆಹಾರದ ಭಾಗ. ಆದರೆ ಜಂಕ್ ಪುಡ್ ಸೇವನೆಗೆ ಸುತರಾಂ ಇವರು ಒಪ್ಪಲ್ಲ.