ಹೈದರಾಬಾದ್: ಸ್ಕಾಟ್ಲೆಂಡ್ ಕ್ರಿಕೆಟ್ ಆಟಗಾರ ಕ್ಯಾಲಮ್ ಮ್ಯಾಕ್ಲಿಯೋಡ್ ಕ್ರಿಕೆಟ್ ವತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
2007ರಲ್ಲಿ ಅಂತರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದ 33ವರ್ಷದ ಆಟಗಾರ ಕ್ಯಾಲಮ್ ಮ್ಯಾಕ್ಲಿಯೋಡ್ ಎಲ್ಲಾ ಮಾದರಿಯಲ್ಲೂ ಒಟ್ಟು 229 ಪಂದ್ಯಗಳನ್ನಾಡಿದ್ದಾರೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡಿಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲೂ ಸ್ಕಾಟ್ಲ್ಯಾಂಡ್ ಪರ ಕಣಕ್ಕಿಳಿದಿದ್ದರು.
ಮ್ಯಾಕ್ಲಿಯೋಡ್ ಅವರು 88 ಏಕದಿನ ಪಂದ್ಯಗಳನ್ನ ಆಡಿದ್ದು, 3026ರನ್ ಕಲೆ ಹಾಕಿದ್ದಾರೆ. ಇದರಲ್ಲಿ 10 ಶತಕ, 13 ಅರ್ಧಶತಕ ದಾಖಲಿಸಿದ್ದಾರೆ. ಜೊತೆಗೆ 11 ವಿಕೆಟ್ ಸಹ ಕಬಳಿಸಿದ್ದಾರೆ. 2014ರಲ್ಲಿ ನ್ಯೂಜಿಲ್ಯಾಂಡ್ನ ಕ್ರೈಸ್ಟ್ ಚರ್ಚ್ನಲ್ಲಿ ಕೆನಡಾ ವಿರುದ್ಧದ ಪಂದ್ಯದಲ್ಲಿ ವೃತ್ತಿ ಜೀವನದ ಅತ್ಯಧಿಕ 175ರನ್ ಗಳಿಸಿದ್ದರು. ಆದರೆ ಅವರ ವೃತ್ತಿ ಜೀವನದ ಪ್ರಮುಖವಾದ ಆಟವೆಂದರೆ, 2018ರಲ್ಲಿ ಗ್ರಾಂಜ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಮೋಘ 140ರನ್ ಕಲೆಹಾಕುವ ಮೂಲಕ ತಂಡಕ್ಕೆ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದರು.